ಕರ್ನಾಟಕ

karnataka

ETV Bharat / city

ಪ್ರದರ್ಶನ, ಮಾರಾಟ ಮೇಳಕ್ಕೆ ಅವಕಾಶವಿಲ್ಲ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಹುಬ್ಬಳ್ಳಿ - ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಪೂರ್ವಾನುಮತಿಯಿಲ್ಲದೇ ಇಂತಹ ಮಾರಾಟ ಮೇಳ, ಪ್ರದರ್ಶನ ಏರ್ಪಡಿಸುವವರು ಹಾಗೂ ಸ್ಥಳ ಬಾಡಿಗೆ ನೀಡಿದ ಸಭಾಂಗಣ, ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್​ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

District Collector Nitesh Patil
ಜಿಲ್ಲಾಧಿಕಾರಿ ನಿತೇಶ್ ಪಾಟೀಲ

By

Published : Jul 15, 2021, 7:01 AM IST

ಧಾರವಾಡ: ಸದ್ಯ ಕೋವಿಡ್​ ನಿಯಂತ್ರಣದಲ್ಲಿರುವುದರಿಂದ ಸರ್ಕಾರ ಕೋವಿಡ್ ಸುರಕ್ಷತಾ ನಿಯಮಗಳ ಪಾಲನೆಯೊಂದಿಗೆ ವ್ಯಾಪಾರ ವಹಿವಾಟಿಗೆ ಮಾತ್ರ ಅವಕಾಶ ನೀಡಿದೆ. ಆದರೆ, ವಿವಿಧ ಬಗೆಯ ವಸ್ತು ಪ್ರದರ್ಶನ, ಮಾರಾಟ ಮೇಳಗಳ ಆಯೋಜನೆಗೆ ಅವಕಾಶ ನೀಡಿಲ್ಲ.

ಹುಬ್ಬಳ್ಳಿ - ಧಾರವಾಡ ಅವಳಿನಗರ ಸೇರಿದಂತೆ ಜಿಲ್ಲೆಯಲ್ಲಿ ಪೂರ್ವಾನುಮತಿಯಿಲ್ಲದೇ ಇಂತಹ ಮಾರಾಟ ಮೇಳ, ಪ್ರದರ್ಶನ ಏರ್ಪಡಿಸುವವರು ಹಾಗೂ ಸ್ಥಳ ಬಾಡಿಗೆ ನೀಡಿದ ಸಭಾಂಗಣ, ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್​ ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿಯ ಗುಜರಾತ್​ ಭವನದಲ್ಲಿ ಇಂದಿನಿಂದ (ಜು.15) ನ್ಯೂ ಕ್ರಾಫ್ಟ್ ಇಂಡಿಯಾ ಸಿಲ್ಕ್ ಮೇಳ ಆಯೋಜಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಇಂತಹ ಮೇಳ ಆಯೋಜಿಸುವುದಕ್ಕೆ ಅವಕಾಶ ಇಲ್ಲ.

ಸರ್ಕಾರದ ನಿರ್ದೇಶನದ ಪ್ರಕಾರ ಜುಲೈ 19ರವರೆಗೆ ಈ ನಿಯಮಗಳು ಜಾರಿಯಲ್ಲಿರುತ್ತವೆ. ನಂತರ ಪ್ರಕಟವಾಗುವ ಮಾರ್ಗಸೂಚಿಗಳನ್ನೂ ಕೂಡ ಜಿಲ್ಲೆಯಲ್ಲಿ ಕಡ್ಡಾಯವಾಗಿ ಪಾಲಿಸಲಾಗುವುದು. ಈಗಾಗಲೇ ಕಲ್ಯಾಣಮಂಟಪಗಳ ಮಾಲೀಕರ ಸಭೆ ನಡೆಸಿ, ಈ ಬಗ್ಗೆ ತಿಳಿವಳಿಕೆ ನೀಡಲಾಗಿದೆ.

ಸರ್ಕಾರ ಅನುಮತಿ ನೀಡಿದ ಮದುವೆ, ಕೌಟುಂಬಿಕ ಕಾರ್ಯಕ್ರಮಗಳಿಗೆ ನೂರಕ್ಕಿಂತ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸುವುದರೊಂದಿಗೆ ಮಾತ್ರ ಕಲ್ಯಾಣಮಂಟಪ, ಛತ್ರ, ಹಾಲ್‌ಗಳನ್ನು ಬಾಡಿಗೆ ನೀಡಬಹುದು. ವಸ್ತು ಪ್ರದರ್ಶನ, ಮಾರಾಟ ಮೇಳಗಳಿಗೆ ಬಾಡಿಗೆ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ಕೊರೊನಾ ಸದ್ಯ ನಿಯಂತ್ರಣದಲ್ಲಿದೆ. ಆದರೆ, ವ್ಯಾಪಾರಸ್ಥರು, ಸಾರ್ವಜನಿಕರು, ಗ್ರಾಹಕರು ಜನಸಂದಣಿಗೆ ಅವಕಾಶ ನೀಡುವಂತಹ ಮಾರಾಟಮೇಳ ವಸ್ತು ಪ್ರದರ್ಶನದಂತಹ ಚಟುವಟಿಕೆಗಳನ್ನು ಆಯೋಜಿಸುವ, ಭಾಗವಹಿಸುವ ಕಾರ್ಯಗಳನ್ನು ಮಾಡಬಾರದು. ಮುಂಜಾಗ್ರತೆ, ಸುರಕ್ಷತಾ ಕ್ರಮಗಳ ಪಾಲನೆಯ ಮೂಲಕವೇ ಕೋವಿಡ್ ಸಂಭಾವ್ಯ ಮೂರನೇ ಅಲೆ ತಡೆಯಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:ಸಿನಿಮಾದಲ್ಲಿ 'ಸೋನು ಸೂದ್'​ಗೆ ಹೊಡೆದಿದ್ದಕ್ಕೆ ಸಿಟ್ಟು... ಮನೆಯ ಟಿವಿ ಒಡೆದು ಹಾಕಿದ ವಿರಾಟ್​!

ABOUT THE AUTHOR

...view details