ಕರ್ನಾಟಕ

karnataka

ETV Bharat / city

ಕೋವಿಡ್ ಹಿನ್ನೆಲೆ ಭಕ್ತರಿಗಿಲ್ಲ ಛಬ್ಬಿ ಗಣೇಶನ ದರ್ಶನ - hubballi latest news

ಗಣೇಶ ಹಬ್ಬದ ವೇಳೆ ಛಬ್ಬಿಯಲ್ಲಿ ಸಾಂಪ್ರದಾಯಕವಾಗಿ ಕುಲಕರ್ಣಿ ಮನೆತನದವರು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬಹುದು. ಆದರೆ ಸಾರ್ವಜನಿಕರು ಭಾಗವಹಿಸಲು ಅವಕಾಶವಿಲ್ಲ.

no permission for devotees to see chabbi ganesha while festival
ಕೋವಿಡ್ ಹಿನ್ನೆಲೆ ಭಕ್ತರಿಗಿಲ್ಲ ಛಬ್ಬಿ ಗಣೇಶನ ದರ್ಶನ

By

Published : Aug 19, 2021, 8:01 PM IST

ಹುಬ್ಬಳ್ಳಿ: ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೊಹರಂ ಹಾಗೂ ಗಣೇಶ ಹಬ್ಬ ಆಚರಿಸುವ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಛಬ್ಬಿ ಗ್ರಾಮದ ಪ್ರಸಿದ್ಧ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೊಹರಂ ಆಚರಣೆ ಕುರಿತು ಉಪವಿಭಾಗಾಧಿಕಾರಿ ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಛಬ್ಬಿ ಗ್ರಾಮ‌ ಪಂಚಾಯಿತಿ ಸಭಾ ಭವನದಲ್ಲಿ ಪೂರ್ವಭಾವಿ ಸಭೆ ಜರುಗಿತು.

ಛಬ್ಬಿ ಗ್ರಾಮ‌ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಸಭೆ

ಸಭೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಓದಿ ಸಾರ್ವಜನಿಕರಿಗೆ ತಿಳಿಸಲಾಯಿತು. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಮಖಗವಸು ಕಡ್ಡಾಯವಾಗಿ ಧರಿಸಬೇಕು. ಮೊಹರಂ ಪಾರ್ಥನೆಯನ್ನು 60 ವರ್ಷ ಮೇಲ್ಪಟ್ಟವರು ಹಾಗೂ ಮಕ್ಕಳು ಮನೆಯಲ್ಲಿಯೇ ಸಲ್ಲಿಸಬೇಕು. ಮಸೀದಿಗಳಲ್ಲಿ ಜನದಟ್ಟಣೆ ಸೇರಿದಂತೆ ಸರತಿಯ ಆಧಾರದಲ್ಲಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಯಾವುದೇ ರೀತಿಯ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ತಿಳಿಸಲಾಯಿತು.

ಛಬ್ಬಿಯಲ್ಲಿ ಸಾಂಪ್ರದಾಯಕವಾಗಿ ಕುಲಕರ್ಣಿ ಮನೆತನದವರು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬಹುದು. ಆದರೆ, ಸಾರ್ವಜನಿಕರು ಭಾಗವಹಿಸಲು ಅವಕಾಶವಿಲ್ಲ. ಹೊರ ರಾಜ್ಯ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಗಣೇಶನ ದರ್ಶನಕ್ಕೆ ಅವಕಾಶವಿಲ್ಲ. ಸಾರ್ವಜನಿಕರಿಗೆ ಗಣೇಶ ದರ್ಶನಕ್ಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೋವಿಡ್ ನಿಯಮಾನುಸಾರ ಗಣೇಶೋತ್ಸವ ಆಚರಿಸುವುದಾಗಿ ಕುಲಕರ್ಣಿ ಮನೆತನದವರು ಸಭೆಗೆ ತಿಳಿಸಿದರು.

ABOUT THE AUTHOR

...view details