ಧಾರವಾಡ:ಮಕ್ಕಳು ಯಾವುದೇ ಭಯ, ಆತಂಕ ಪಡಬಾರದು. ಶಿಕ್ಷಣ ಮತ್ತು ಅಧ್ಯಯನದ ಬಗ್ಗೆ ಪ್ರೀತಿ ಹೆಚ್ಚಿಸಲು ಆತ್ಮವಿಶ್ವಾಸ ಹೆಚ್ಚಿಸಬೇಕು. ಪರೀಕ್ಷಾ ನಕಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕಲು ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ವಿದ್ಯಾರ್ಥಿಗಳಲ್ಲಿ ಯಾವುದೇ ಭಯ, ಆತಂಕ ಇರಬಾರದು: ಸಚಿವ ಸುರೇಶ್ ಕುಮಾರ್
ಮಕ್ಕಳು ಯಾವುದೇ ಭಯ, ಆತಂಕ ಪಡಬಾರದು. ಶಿಕ್ಷಣ ಮತ್ತು ಅಧ್ಯಯನದ ಬಗ್ಗೆ ಪ್ರೀತಿ ಹೆಚ್ಚಿಸಲು ಆತ್ಮವಿಶ್ವಾಸ ಹೆಚ್ಚಿಸಬೇಕು. ಪರೀಕ್ಷಾ ನಕಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕಲು ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಡಿಡಿಪಿಐ, ಬಿಇಒ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಶೈಕ್ಷಣಿಕ ಪ್ರಗತಿ ಚುರುಕುಗೊಳಿಸಲು ಎಲ್ಲಾ ಮಕ್ಕಳ ಪಾಲಕರಿಗೂ ಪತ್ರ ಬರೆದು ಪಾಲಕರ ಸಹಭಾಗಿತ್ವ ಪಡೆಯಬೇಕು ಎಂದರು. ಅದೇ ರೀತಿ ಉತ್ತಮ ಫಲಿತಾಂಶ ಬರಲು ಕಾಪಿ ಮಾಡಿಸುವ ಬದಲು ಸರಿಯಾದ ಕ್ರಮ ರೂಪಿಸಿ ಎಲ್ಲಾ ಕಡೆ ಉತ್ತಮ ಫಲಿತಾಂಶ ಬರಬೇಕು, ಗುಣಮಟ್ಟ ಹೆಚ್ಚಾಗಬೇಕು. ಉಳಿದ 93 ದಿನಗಳು ವ್ರತವಾಗಬೇಕು. ಅಲ್ಲದೇ ಶಿಕ್ಷಕರು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಬೇಕು ಎಂದು ಸಲಹೆ ನೀಡಿದರು.