ಕರ್ನಾಟಕ

karnataka

ETV Bharat / city

ನನ್ನ ವಿರೋಧಿಸುವರಿಗೆ ದೇವರು ಒಳ್ಳೆಯದು ಮಾಡಲಿ: ಕೋನರೆಡ್ಡಿ - ಕೋನರೆಡ್ಡಿ ವಿರುದ್ಧ ಪ್ರತಿಭಟನೆ

ಕಳೆದ ಎರಡು ದಿನಗಳ ಹಿಂದೆ ಜೆಡಿಎಸ್​​ನಿಂದ ಕಾಂಗ್ರೆಸ್​​ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮಾಜಿ ಶಾಸಕ ಎನ್​​.ಎಚ್​ ಕೋನರೆಡ್ಡಿ, ರಾಜಕೀಯಕ್ಕೆ ಬಂದ ಮೇಲೆ ಆಸ್ತಿ ಮಾಡುವ ಅವಶ್ಯಕತೆ ನನಗಿಲ್ಲ ಎಂದರು.

NH Konareddy joins Congress
NH Konareddy joins Congress

By

Published : Dec 16, 2021, 2:37 AM IST

ಹುಬ್ಬಳ್ಳಿ:ನಮ್ಮ ಅಪ್ಪ ಅವಾಗಲೇ ಶ್ರಿಮಂತ, ರಾಜಕೀಯಕ್ಕೆ ಬಂದ ಮೇಲೆ ಆಸ್ತಿ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ಜೆಡಿಎಸ್ ಮುಖಂಡ ಸುರೇಶ್ ಹಿರೇಮಠ ಆರೋಪಕ್ಕೆ ತಿರಗೇಟು ನೀಡಿದರು.

ನನ್ನ ವಿರೋಧಿಸುವರಿಗೆ ದೇವರು ಒಳ್ಳೆಯದು ಮಾಡಲಿ ಎಂದ ಕೋನರೆಡ್ಡಿ

ನಗರದ ಕಾಂಗ್ರೆಸ್ ಕಛೇರಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ಸನ್ಮಾನ ಮಾಡಿದ ನಂತರ ಮಾತನಾಡಿ, ನಾನು ನವಲಗುಂದ‌ ಕ್ಷೇತ್ರದ ಜನತೆ ಒತ್ತಾಯ ಪೂರ್ವಕವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ನಾಯಕರು ಸಹ ನನಗೆ ಉತ್ತಮವಾಗಿ ಬೆಂಬಲ ಸೂಚಿಸಿದ್ದಾರೆ. ಇನ್ನೂ ಧಾರವಾಡದಲ್ಲಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಕುರಿತು ಮಾತಾನಾಡಿ, ನನ್ನ ವಿರೋಧಿಸುವವರಿಗೆ ದೇವರು ಒಳ್ಳೆಯದು ಮಾಡಲಿ, ಇದರಲ್ಲಿ ಬಿಜೆಪಿಯವರ ಕೈವಾಡವಿದೆ. ನಾನು ರೈತನ ಮಗ, ಇಂತಹ ಸಣ್ಣಪುಟ್ಟ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ ಎಂದರು. ಕಾಂಗ್ರೆಸ್​ನಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತೇನೆ ಎಂದರು.

ಇದನ್ನೂ ಓದಿರಿ:ಮತಾಂತರ ನಿಷೇಧ ಕಾಯ್ದೆಗೆ ನಮ್ಮ ಬೆಂಬಲ ಇಲ್ಲ; ಶೇ.40ರ ಬಗ್ಗೆ ಮಾತನಾಡಲು 'ಕೈ' ನಾಯಕರಿಗೆ ನೈತಿಕತೆಯಿಲ್ಲ:ಹೆಚ್​​ಡಿಕೆ

ಜೆಡಿಎಸ್‌ ತೊರೆದು‌ ಕಾಂಗ್ರೆಸ್ ಪಕ್ಷ ಸೇರಿರುವ ಕೋನರೆಡ್ಡಿ ನಡೆಯನ್ನು ಖಂಡಿಸಿರುವ ಧಾರವಾಡ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು. ಈ ವೇಳೆ ಅವರೊಬ್ಬ ಭ್ರಷ್ಟ ರಾಜಕಾರಣಿ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವುದೇ ಅವರ ಕೆಲಸವಾಗಿದೆ ಎಂದು ಆರೋಪಿಸಿದರು.

ABOUT THE AUTHOR

...view details