ಕರ್ನಾಟಕ

karnataka

ETV Bharat / city

ಕೋನರೆಡ್ಡಿ ವೈಮಾನಿಕ ಸಮೀಕ್ಷೆ ಅಸಲಿಯತ್ತು ಬಯಲು... ಅಷ್ಟಕ್ಕೂ ಆಗಿದ್ದೇನು? - ವೈಮಾನಿಕ ಸಮೀಕ್ಷೆ

ಮಾಜಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿಗಳ‌ ರಾಜಕೀಯ ಕಾರ್ಯದರ್ಶಿ ಎನ್.ಹೆಚ್ ಕೋನರೆಡ್ಡಿ ಅವರು ವೈಮಾನಿಕ ಸಮೀಕ್ಷೆ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ‌ ಹರಿಬಿಟ್ಟ ಫೋಟೋಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಎನ್ ಹೆಚ್ ಕೋನರೆಡ್ಡಿ ವೈಮಾನಿಕ ಸಮೀಕ್ಷೆ ಫೋಟೋಗಳು

By

Published : Aug 10, 2019, 3:24 AM IST

ಹುಬ್ಬಳ್ಳಿ: ಮಾಜಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿಗಳ‌ ರಾಜಕೀಯ ಕಾರ್ಯದರ್ಶಿ ಎನ್.ಹೆಚ್ ಕೋನರೆಡ್ಡಿ ಅವರು ವೈಮಾನಿಕ ಸಮೀಕ್ಷೆ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ‌ ಹರಿಬಿಟ್ಟ ಫೋಟೋಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.

ವೈಮಾನಿಕ ಸಮೀಕ್ಷೆ ಫೋಟೋಗಳು

ನಿನ್ನೆ ಸಾಯಂಕಾಲ ಹುಬ್ಬಳ್ಳಿಯಿಂದ ತೆರಳಿ ನವಲಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ, ಅಣ್ಣಿಗೇರಿ ಹಾಗು ನವಲಗುಂದ ಗ್ರಾಮಗಳಲ್ಲಿ ಮಳೆಯ ಅತಿವೃಷ್ಠಿಯಿಂದ ಹಾನಿಯಾದ ಜಮೀನುಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದೇನೆ ಎಂದು‌ ಫೋಟೋಗಳನ್ನು ಹರಿಬಿಟ್ಟಿದ್ದರು. ಆದ್ರೆ ಈ ವೈಮಾನಿಕ ಸಮೀಕ್ಷೆಯ ಅಸಲಿ ಬಣ್ಣ ಬಯಲಾಗಿದೆ. ನಿನ್ನೆ 3.30 ಕ್ಕೆ ಬೆಂಗಳೂರಿನಿಂದ ಟೇಕ್​ ಆಫ್​ ಆದ ಸ್ಟಾರ್ ಏರವೇಸ್ 4.30 ರ ಸುಮಾರಿಗೆ ಹುಬ್ಬಳ್ಳಿಗೆ ತಲುಪಿದೆ. ಆದ್ರೆ ಸಿಗ್ನಲ್ ಸಿಗದ ಕಾರಣ ಲ್ಯಾಂಡ್​ ಆಗದೇ ಆಕಾಶದಲ್ಲಿ ಅರ್ಧಗಂಟೆಯ ಕಾಲ ಹಾರಾಟ ನಡೆಸಿದೆ.

ವೈಮಾನಿಕ ಸಮೀಕ್ಷೆ ಫೋಟೋಗಳು

ಈ ವೇಳೆ ನವಲಗುಂದ ಹಾಗೂ ‌ಕುಂದಗೋಳ ಭಾಗದಲ್ಲಿ ಹಾರಾಟ ನಡೆಸುವಾಗ ಫೋಟೋ ಕ್ಲಿಸಿಕೊಂಡ ಎನ್. ಹೆಚ್ ಕೋನರೆಡ್ಡಿ ನಾನೇ ವೈಮಾನಿಕ ಸಮೀಕ್ಷೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಫೋಟೋಗಳಿಗೆ ಪರ ವಿರೋಧ ವ್ಯಕ್ತವಾಗಿದೆ. ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಪರಿಶೀಲನೆ ಮಾಡುವುದನ್ನು ಬಿಟ್ಟು ಈ ರೀತಿ ಬಿಟ್ಟಿ ಪ್ರಚಾರಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈಮಾನಿಕ ಸಮೀಕ್ಷೆ ಫೋಟೋಗಳು

ABOUT THE AUTHOR

...view details