ಹುಬ್ಬಳ್ಳಿ:ಕಳೆದ ಮೂರು ದಿನಗಳ ಹಿಂದೆಯಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ಖಾಸಗಿ ವಾಹಿನಿ ನಿರೂಪಕ ಅರುಣ ಬಡಿಗೇರ ಅವರ ತಂದೆ ಸಹ ಕೊರೊನಾಗೆ ಬಲಿಯಾಗಿದ್ದಾರೆ.
ಖಾಸಗಿ ಟಿವಿ ನಿರೂಪಕ ಅರುಣ ಬಡಿಗೇರ ತಂದೆ ಕೊರೊನಾದಿಂದ ನಿಧನ! - ಹುಬ್ಬಳ್ಳಿಯಲ್ಲಿ ಕೊರೊನಾ ಹೆಚ್ಚಳ
ಖಾಸಗಿ ಚಾನೆಲ್ ನಿರೂಪಕ ಅರುಣ ಬಡಿಗೇರ ತಂದೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ, ಕಳೆದ 3 ದಿನಗಳ ಹಿಂದಷ್ಟೇ ಅರುಣ್ ತಾಯಿ ಸಹ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು.

corona death
ಚಂದ್ರಶೇಖರ ಬಡಿಗೇರ ಅವರು ಕೊರೊನಾ ಪಾಸಿಟಿವ್ ಹಿನ್ನೆಲೆ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಅರುಣ್ ತಾಯಿ ಕಸ್ತೂರೆಮ್ಮ ಬಡಿಗೇರ ಕೊರೊನಾದಿಂದಲೇ ಸಾವಿಗೀಡಾಗಿದ್ದರು. ಅರುಣ್ ಅವರ ಕುಟುಂಬದ ಬಹುತೇಕರಿಗೆ ಕೊರೊನಾ ಸೋಂಕು ತಗುಲಿದ್ದು, ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.