ಕರ್ನಾಟಕ

karnataka

ETV Bharat / city

ರಾಜ್ಯದಲ್ಲೇ ಮೊದಲ ಪ್ರಯತ್ನ: 2 ರೂಪಾಯಿಗೆ ಸಿಗಲಿದೆ ಸರ್ಜಿಕಲ್ ಮಾಸ್ಕ್ - hubbali latest news

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿದೆ. ಆದರೆ, ಸೋಂಕು ಮಾತ್ರ ಸಂಪೂರ್ಣವಾಗಿ ಹೋಗಿಲ್ಲ. ಹೀಗಾಗಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೂ ಸಾಕಷ್ಟು ಜನರು ಇನ್ನೂ ಮಾಸ್ಕ್ ಧರಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಮೊದಲ‌ ಬಾರಿಗೆ ಸ್ವಯಂಚಾಲಿತ ಮಾಸ್ಕ್ ವೆಂಡಿಂಗ್ ಮಷಿನ್ ಅನುಷ್ಠಾನಕ್ಕೆ ಬಂದಿದೆ. ಏನಿದು ಮಷಿನ್ ...ಅದರ ಕಾರ್ಯವೇನು ಅಂತೀರಾ... ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

new-mask-vending-machine
ಸರ್ಜಿಕಲ್ ಮಾಸ್ಕ್

By

Published : Jun 16, 2021, 10:31 PM IST

ಹುಬ್ಬಳ್ಳಿ:ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮಾಸ್ಕ್ ದೊರೆಯಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿಯ ಯಂಗ್ ಇಂಡಿಯಾ ಸಂಸ್ಥೆ ಹೊಸ ಅಭಿಯಾನ ಆರಂಭಿಸಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ವಿತರಿಸುವ ಸ್ವಯಂಚಾಲಿತ ವೆಂಡಿಂಗ್ ಮಷಿನ್ ರೂಪಿಸಿ 12 ಸ್ಥಳಗಳಲ್ಲಿ ಅಳವಡಿಸಲು‌ ಮುಂದಾಗಿದೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 5 ರೂ. ನಿಂದ 10 ರೂ.ಗೆ ದೊರೆಯುವ ಮೂರು ಪದರಿನ ಸರ್ಜಿಕಲ್ ಮಾಸ್ಕ್ ಸಿಗುತ್ತೆ. ಆದ್ರೆ ಇಲ್ಲಿ ಕೇವಲ 2 ರೂಪಾಯಿಗೆ ದೊರೆಯಲಿದೆ.

ಸರ್ಜಿಕಲ್ ಮಾಸ್ಕ್ ವೆಂಡಿಂಗ್​ ಮಷಿನ್​ಗೆ ಚಾಲನೆ

ಓದಿ: ಸರ್ಜಿಕಲ್ ಮಾಸ್ಕ್​, ವೈದ್ಯಕೀಯ​ ಗಾಗಲ್​​ ರಫ್ತಿಗೆ ಷರತ್ತುಬದ್ಧ ಒಪ್ಪಿಗೆ​​ ನೀಡಿದ ಕೇಂದ್ರ

ಸಾರ್ವಜನಿಕರು 2 ರೂಪಾಯಿ ನಾಣ್ಯವನ್ನು ಮಾಸ್ಕ್ ವೆಂಡಿಂಗ್ ಮಷಿನ್​​​ಗೆ ಹಾಕಿದರೆ ಮಾಸ್ಕ್ ದೊರೆಯಲಿದೆ. ದೇಶದಲ್ಲಿ ಚೆನ್ನೈ ನಂತರ ಇಂತಹದ್ದೊಂದು ಪ್ರಯೋಗವನ್ನು ಹುಬ್ಬಳ್ಳಿಯ ಯಂಗ್ ಇಂಡಿಯಾ ಸಂಸ್ಥೆ ಅನುಷ್ಠಾನಗೊಳಿಸಿದೆ. 12 ಸ್ವಯಂಚಾಲಿತ ಮಾಸ್ಕ್ ಗಳನ್ನು ಮುಂಬೈನಿಂದ ತರಿಸಲಾಗಿದೆ. ವಿತರಣಾ ಯಂತ್ರಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಸಚಿವ ಜಗದೀಶ್ ಶೆಟ್ಟರ್ ಉದ್ಘಾಟನೆ ಮಾಡಿ ಸಾರ್ವಜನಿಕರ ಬಳಕೆಗೆ ಚಾಲನೆ ನೀಡಿದರು.

ಕೇವಲ 2 ರೂಪಾಯಿ ನಾಣ್ಯ ಹಾಕಿ ಒಂದು ಮಾಸ್ಕ್ ಪಡೆಯಬಹುದಾದ ಈ ವೆಂಡಿಂಗ್ ಮಷಿನ್​​​ಗಳನ್ನ ಆರಂಭದಲ್ಲಿ ಹುಬ್ಬಳ್ಳಿ-ಧಾರವಾಡ ನಗರದ ಜನನಿಬಿಡ ಪ್ರದೇಶಗಳಲ್ಲಿ ಅಳವಡಿಸಲಾಗುವುದು. ಎಪಿಎಂಸಿ, ಬಸ್ ನಿಲ್ದಾಣ, ರೈಲು ನಿಲ್ದಾಣ, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಸ್ಥಾಪನೆ ಮಾಡಲು ಸಂಸ್ಥೆ ನಿರ್ಧರಿಸಿದೆ. ಯಂಗ್ ಇಂಡಿಯಾ ಹುಬ್ಬಳ್ಳಿ ಚಾಪ್ಟರ್ ಅವರು ಪ್ರಾರಂಭಿಕ ಹಂತದಲ್ಲಿ 6 ತಿಂಗಳು ಗಳವರೆಗೆ ಮಾಸ್ಕ್ ಪೂರೈಕೆ ಮಾಡಲಿದ್ದು, ಅವಶ್ಯಕತೆಯಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಷಿನ್​​​ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಸಹಾಯ ಮಾಡುವ ಯೋಚನೆಯಲ್ಲಿದ್ದಾರೆ.

ಕೊರೊನಾ ತೀವ್ರತೆ ‌ಕಡಿಮೆ ಇರಬಹುದು. ಆದರೆ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.‌ ಹೀಗಾಗಿ ಹುಬ್ಬಳ್ಳಿಯಲ್ಲಿ ಯಂಗ್ ಇಂಡಿಯಾ ಸಂಸ್ಥೆ ಸರ್ಕಾರ ಮಾಡದ ಕಾರ್ಯವನ್ನು ಕೈಗೆತ್ತಿಕೊಂಡು ಸ್ವಯಂಚಾಲಿತ ಮಾಸ್ಕ್ ಮಷಿನ್ ಅಳವಡಿಕೆ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ABOUT THE AUTHOR

...view details