ಹುಬ್ಬಳ್ಳಿ: ಪ್ರತಿ ಮನೆಮನೆಗೂ ನ್ಯಾಚುರಲ್ ಗ್ಯಾಸ್ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಜಾರಿ ಮಾಡಿರುವ ಯೋಜನೆ ನಿರೀಕ್ಷೆ ಮಟ್ಟದಲ್ಲಿ ಪೂರ್ಣಗೊಳ್ಳದೇ ವಿಳಂಬವಾಗುತ್ತಿದೆ.
ಪ್ರತಿ ಮನೆಗೂ ನ್ಯಾಚುರಲ್ ಗ್ಯಾಸ್ ವ್ಯವಸ್ಥೆ ಅಳವಡಿಸುವ ಮಹತ್ತರ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಐಒಸಿ ಮತ್ತು ಅದಾನಿ ಗ್ಯಾಸ್ ಕಂಪನಿಗೆ ಜಂಟಿಯಾಗಿ ಈ ಯೋಜನೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಕಳೆದ 2016ರಿಂದ ಅವಳಿ ನಗರದಲ್ಲಿ ನ್ಯಾಚುರಲ್ ಗ್ಯಾಸ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಅಧಿಕಾರಿಗಳಲ್ಲಿ ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿ ಹಾಗೂ ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತಂತೆ ತಿಳುವಳಿಕೆ, ಜಾಗೃತಿಯ ಕೊರತೆಯೇ ಈ ಸಮಸ್ಯೆಗೆ ಕಾರಣವೇ ಅನ್ನೋ ಅನುಮಾನ ಸೃಷ್ಟಿಯಾಗಿದೆ.
ನೈಸರ್ಗಿಕ ಅನಿಲ ಪೈಪ್‌ಲೈನ್ ಅಳವಡಿಕೆ ಕಾರ್ಯ ವಿಳಂಬ - ಪ್ರತಿಕ್ರಿಯೆ ಪ್ರಮುಖವಾಗಿ ಅವಳಿ ನಗರದಲ್ಲಿ 18 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. 2021ರ ಮೇ ವರೆಗೆ ಸುಮಾರು 19 ಸಾವಿರ ಮನೆಗಳಿಗೆ ಪೈಪ್ ಮೂಲಕ ನ್ಯಾಚುರಲ್ ಗ್ಯಾಸ್ ಅಳವಡಿಕೆಯ ಗುರಿಯನ್ನು ಈ ಕಂಪನಿಗಳು ಹೊಂದಿದ್ದವು. ಆದರೆ ಕೋವಿಡ್ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲವಾದ ಹಿನ್ನೆಲೆಯಲ್ಲಿ ಇದೀಗ ಕೇವಲ 11 ಸಾವಿರ ಮನೆಗಳಿಗೆ ಪೈಪ್ ಲೈನ್ ಅಳವಡಿಸಲಾಗಿದೆ. ಹೀಗಾಗಿ ಇನ್ನೂ ಬಾಕಿ ಇರುವ ಮನೆಗಳಿಗೆ ನ್ಯಾಚುರಲ್ ಗ್ಯಾಸ್ ಪೈಪ್ ಲೈನ್ ಅಳವಡಿಸಲು ಡಿಸೆಂಬರ್ವರೆಗೂ ಕಾಲಾವಕಾಶ ಕೇಳಿದೆ.
ಇದನ್ನೂ ಓದಿ:ಅಕ್ಟೋಬರ್ 11ರಿಂದ ಒಂದು ವಾರ ಹೈಕೋರ್ಟ್ಗೆ ದಸರಾ ರಜೆ
2022-23ರಲ್ಲಿ 21 ಸಾವಿರಕ್ಕೂ ಅಧಿಕ ಮನೆಗಳಿಗೆ ಪೈಪ್ ಲೈನ್ ಅಳವಡಿಸುವ ಗುರಿ ಹೊಂದಲಾಗಿದೆ. ಆದರೆ ಈ ಯೋಜನೆಯ ಕುರಿತು ಜನರಲ್ಲಿ ಜಾಗೃತಿ ಮೂಡಿದ್ರೆ ಮಾತ್ರ ಯೋಜನೆಯ ಉಪಯೋಗ ಸಾರ್ವಜನಿಕರಿಗೆ ದೊರೆಯಲಿದೆ.