ಹುಬ್ಬಳ್ಳಿ:ವಿದ್ಯಾನಗರದಲ್ಲಿರುವಎಚ್ಐವಿ, ಏಡ್ಸ್ಮತ್ತು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಬುಕ್ ಹಾಗೂ ವಾಟರ್ ಬಾಟಲ್ ವಿತರಿಸುವ ಮೂಲಕ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಯಿತು.
ಹುಬ್ಬಳ್ಳಿ ಲೇಡಿಸ್ ಸರ್ಕಲ್ ವತಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಧಾರವಾಡ ಹಾಗೂ ಹುಬ್ಬಳ್ಳಿ ಲೇಡಿಸ್ ಸರ್ಕಲ್ ಸಂಯೋಗದೊಂದಿಗೆ ಕೇಕ್ ಕತ್ತರಿಸಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತಾನಾಡಿದ ಹುಬ್ಬಳ್ಳಿ ಲೇಡಿಸ್ ಸರ್ಕಲ್ ಸಂಸ್ಥಾಪಕಿ ಮಾನಸಿ ಕೊಠಾರಿ, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಎಂದರೆ ಕೇವಲ ಆಚರಣೆ ಅಲ್ಲ. ಪ್ರತಿಯೊಬ್ಬ ಹೆಣ್ಣು ಮಕ್ಕಳು ಬಲಶಾಲಿಯಾಗುವ ಜೊತೆಗೆ ಶಿಕ್ಷಣ ಪಡೆಯುವ ಹಾಗೆ ಎಲ್ಲರೂ ಪ್ರಯತ್ನ ಪಡಬೇಕು.
ಓದಿ:ಆಂಧ್ರ ಸಿಎಂ ವಿರುದ್ಧ ಸಮನ್ಸ್ ಜಾರಿ ಮಾಡಿದ ತೆಲಂಗಾಣ ಕೋರ್ಟ್
ಇನ್ನು, ಹೆಣ್ಣು ಮಕ್ಕಳು ಸಾಮಾನ್ಯ ಜೀವನವನ್ನು ನಡೆಸಲು ಸರ್ಕಾರ ಹೊಸ ಯೋಜನೆಯನ್ನು ಜಾರಿ ಮಾಡಬೇಕು ಎಂದರು.