ಹುಬ್ಬಳ್ಳಿ:ಧಾರವಾಡದ ಅಣ್ಣಿಗೇರಿ ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಹಿರಿಯರು, ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳನ್ನ ವಿತರಿಸಿದ್ದಾರೆ.
ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಮುಸ್ಲಿಂ ಸಮಾಜದ ಹಿರಿಯರು - ಹುಬ್ಬಳ್ಳಿ ಸುದ್ದಿ
ಧಾರವಾಡದ ಅಣ್ಣಿಗೇರಿ ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಹಿರಿಯರು, ಬಡ ಕುಟುಂಬಗಳಿಗೆ ಅಕ್ಕಿ, ತೊಗರಿ ಬೆಳೆ, ಎಣ್ಣೆ, ಸೋಪ್ ಸೇರಿದಂತೆ ಅಗತ್ಯ ವಸ್ತುಗಳನ್ನ ವಿತರಿಸಿದ್ದಾರೆ.
ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ವಿತರಿಸಿದ ಮುಸ್ಲಿಂ ಸಮಾಜದ ಹಿರಿಯರು
ಪ್ರತಿ ವರ್ಷ ರಂಜಾನ್ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಈ ವರ್ಷ ಮಹಾಮಾರಿ ಕೊರೊನಾ ವೈರಸ್ನಿಂದಾಗಿ ರಂಜಾನ್ ಹಬ್ಬವನ್ನ ಮನೆಯಲ್ಲೇ ಆಚರಿಸಲು ಸರ್ಕಾರ ತಿಳಿಸಿದೆ.
ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಬಡ ಜನರಿಗೆ ಅಕ್ಕಿ, ತೊಗರಿ ಬೆಳೆ, ಎಣ್ಣೆ, ಸೋಪ್ ಹೀಗೆ ತಮ್ಮ ಕೈಲಾದಷ್ಟು ನೆರವು ನೀಡಲು ಮುಂದಾಗಿದ್ದಾರೆ.