ಹುಬ್ಬಳ್ಳಿ: ನಂದು ಆ ಧರ್ಮ, ನಿಂದು ಈ ಧರ್ಮ ಎಂದು ದೇಶದಲ್ಲಿ ಜಾತಿಗೆ ಸಂಬಂಧಿಸಿದಂತೆ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಆದರೆ, ಇಲ್ಲೊಂದು ಮುಸ್ಲಿಂ ಸಂಘಟನೆ ಬರೊಬ್ಬರಿ ಒಂದು ವರ್ಷದಿಂದ ನಿರಂತರವಾಗಿ ಜಾತಿ, ಧರ್ಮ ನೋಡದೆ ಹಸಿದ ಜೀವಗಳಿಗೆ ಅನ್ನ ನೀಡುವ ಕೆಲಸ ಮಾಡುತ್ತಿದೆ.
ಧರ್ಮ ಮರೆತು ಬಡವರು, ನಿರ್ಗತಿಕರ ಹಸಿವು ನೀಗಿಸುತ್ತಿರುವ ಮುಸ್ಲಿಂ ಸಂಘಟನೆ ಕರ್ನಾಟಕ ವೆಲ್ಪೇರ್ ಪೀಸ್ ಕೌಂಸೀಲ್ ಎಂಬ ಮುಸ್ಲಿಂ ಸಂಘಟನೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಬಳಿ ಇರುವ ಮೈದಾನದಲ್ಲಿ ಕಾರ್ಮಿಕರಿಗೆ, ನಿರ್ಗತಿಕ ಹಸಿದ ಬಡ ಜೀವಿಗಳಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದೆ.
ಇದನ್ನೂ ಓದಿರಿ:ಅತಿಥಿ ಉಪನ್ಯಾಸಕರ ಹುದ್ದೆಗೆ ಆನ್ಲೈನ್ ಅರ್ಜಿ: ತಪ್ಪು ಮಾಹಿತಿ ಸರಿಪಡಿಸಲು ಎರಡು ದಿನ ಅವಕಾಶ
ಕಳೆದ ವರ್ಷ ಫೆಬ್ರವರಿ 11ಕ್ಕೆ ಮಹತ್ವದ ಕಾರ್ಯ ಆರಂಭಿಸಿದ ಸಂಘಟನೆಯ ಸದಸ್ಯರು ನಿರಂತರವಾಗಿ ನಿರ್ಗತಿಕರಿಗೆ ಊಟ ನೀಡುವ ಮೂಲಕ ಹಸಿವು ನೀಗಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಈ ಮಹತ್ವದ ಕಾರ್ಯ ಆರಂಭಿಸಿ ಒಂದು ವರ್ಷ ಕಳೆದಿರುವ ಕಾರಣ, ಸಂಘಟನೆ ಸದಸ್ಯರು ಸಂತೋಷದ ಜೊತೆಗೆ ಧರ್ಮ ಮರೆತು ನಾವೆಲ್ಲರೂ ಒಂದೇ ಎಂಬ ನಾಮ ಧ್ಯೇಯದೊಂದಿಗೆ ಮುನ್ನಡೆಯುವುದಾಗಿ ತಿಳಿಸಿದ್ದಾರೆ.