ಕರ್ನಾಟಕ

karnataka

ETV Bharat / city

ಪ್ರಾನ್ಸ್ ಅಧ್ಯಕ್ಷರ ಹೇಳಿಕೆ ಕರಪತ್ರ ಹಂಚಿಕೆ ಆರೋಪ: ಮುಸ್ಲಿಂ ಯವಕರ ಕಸ್ಟಡಿ ಖಂಡಿಸಿ ಪ್ರತಿಭಟನೆ - Hubli Latest News

ಮುಸ್ಲಿಂ ಧರ್ಮಗುರು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಫ್ರಾನ್ಸ್‌ ಅಧ್ಯಕ್ಷರ ಸಂದೇಶಗಳನ್ನೊಳಗೊಂಡು ಕರಪತ್ರ ಹಂಚುತ್ತಿದ್ದಾರೆ ಎಂಬ ಆರೋಪದ ಮೇಲೆ ಮುಸ್ಲಿಂ ಸಮಾಜದ 5 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಮುಸ್ಲಿಂ ಮುಖಂಡರು, ಕಸಬಾ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

muslim-leaders-protest-in-front-of-kasaba-police-station
ಪ್ರಾನ್ಸ್ ಅಧ್ಯಕ್ಷರ ಹೇಳಿಕೆ ಕರಪತ್ರ ಹಂಚಿಕೆ ಆರೋಪ: ಮುಸ್ಲಿಂ ಯವಕರ ಬಂಧನ ಖಂಡಿಸಿ ಪ್ರತಿಭಟನೆ

By

Published : Nov 2, 2020, 12:33 PM IST

Updated : Nov 2, 2020, 1:07 PM IST

ಹುಬ್ಬಳ್ಳಿ: ಮುಸ್ಲಿಂ ಧರ್ಮಗುರು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಫ್ರಾನ್ಸ್‌ ಅಧ್ಯಕ್ಷರ ಸಂದೇಶಗಳನ್ನೊಳಗೊಂಡ ಕರಪತ್ರ ಹಂಚುತ್ತಿದ್ದಾರೆ ಎಂಬ ಆರೋಪದ ಮೇಲೆ ಮುಸ್ಲಿಂ ಸಮಾಜದ 5 ಯುವಕರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟಿಸಲಾಯಿತು.

ಕಸಬಾ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸ್ಥಳೀಯ ಮುಸ್ಲಿಂ ಮುಖಂಡರು, ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈ ಮೀರುವುದನ್ನ ಅರಿತ ಪೊಲೀಸರು, ಕೆಲ ಹೊತ್ತಿನ ಬಳಿಕ ಐವರನ್ನು ಬಿಡುಗಡೆ ಮಾಡಿದರು. ಮುಸ್ಲಿಂ ಧರ್ಮಗುರು ಮೊಹಮ್ಮದ್‌ ಪೈಗಂಬರ್‌ ಬಗ್ಗೆ ಫ್ರಾನ್ಸ್ ಅಧ್ಯಕ್ಷರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಯುವಕರು ಕರಪತ್ರ ಹಂಚುತ್ತಿದ್ದ ವಿಡಿಯೋ ವೈರಲ್‌ ಆಗಿತ್ತು. ಶಾಂತಿ ಕದಡದಂತೆ ಎಚ್ಚರಿಕೆ ವಹಿಸಲು ಮುಂಜಾಗ್ರತಾ ಕ್ರಮವಾಗಿ ಪೊಲೀಸರು 5 ಯುವಕರನ್ನು ವಶಕ್ಕೆ ಪಡೆದಿದ್ದರು‌.

ಪ್ರಾನ್ಸ್ ಅಧ್ಯಕ್ಷರ ಹೇಳಿಕೆ ಕರಪತ್ರ ಹಂಚಿಕೆ ಆರೋಪ: ಮುಸ್ಲಿಂ ಯವಕರ ಕಸ್ಟಡಿ ಖಂಡಿಸಿ ಪ್ರತಿಭಟನೆ

ಹೀಗಾಗಿ, ಇಂದು ಕಸಬಾ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಸ್ಥಳೀಯ ಮುಸ್ಲಿಂ ಮುಖಂಡರು, ಈದ್ ಮಿಲಾದ್‌ ದಿನದಂದು ರಸ್ತೆಯಲ್ಲಿ ಬಿದ್ದಿದ್ದ ಭಿತ್ತಿಪತ್ರಗಳನ್ನ ನಮ್ಮ ಸಮಾಜದ ಕೆಲ ಯುವಕರು ತುಳಿದಿದ್ದರು. ಅವುಗಳನ್ನು ಯಾರು ಹಂಚಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಯಾರೂ ದೂರು ನೀಡದಿದ್ದರೂ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು, ಮುಸ್ಲಿಂ ಮುಖಂಡರ ಜೊತೆ ಮಾತುಕತೆ ನಡೆಸಿ ಯುವಕರನ್ನು ಬಿಡುಗಡೆಗೊಳಿಸಿದ್ದಾರೆ.

Last Updated : Nov 2, 2020, 1:07 PM IST

ABOUT THE AUTHOR

...view details