ಹುಬ್ಬಳ್ಳಿ :ಶ್ರೀ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ನಾಳೆ ನಡೆಯುವ ಸತ್ಯ ದರ್ಶನ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಪೊಲೀಸ್ ಇಲಾಖೆ ಸಭೆ ನಡೆಸಲು ದಿಂಗಾಲೇಶ್ವರ ಶ್ರೀಗಳಿಗೆ ಅವಕಾಶ ನೀಡುತ್ತಾ ಎಂಬ ಪ್ರಶ್ನೆಯೂ ಮೂಡುತ್ತಿದೆ.
ಮಠದ ಪೀಠಕ್ಕಾಗಿ ನಡೆಯುತ್ತಿರುವ ಒಳ ಜಗಳ ಜಗಜ್ಜಾಹೀರಾಗಿದೆ. ಹೀಗಾಗಿ ಸಭೆಗೆ ಅವಕಾಶ ನೀಡಿದ್ರೆ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿವೆ. ಮಠದ ಆವರಣದಲ್ಲಿ ಸಭೆ ನಡೆಸಲು ಅವಕಾಶ ನೀಡುವ ಅನುಮಾನ ಹೆಚ್ಚಾಗಿದೆ. ಈಗಾಗಲೇ ಸತ್ಯ ದರ್ಶನ ಸಭೆಗೆ ದಿಂದಾಲೇಶ್ವರ ಶ್ರೀಗಳು ಷರತ್ತು ಬದ್ಧ ಅವಕಾಶ ನೀಡುವಂತೆ ಪೊಲೀಸರಿಗೂ ಮನವಿ ಸಲ್ಲಿಸಿದ್ದಾರೆ.
ಮೂರುಸಾವಿರ ಮಠದ ಸುತ್ತಲೇ ಎಲ್ಲರ ಚಿತ್ತ.. ಇತ್ತ ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ನಾನೇ ಉತ್ತರಾಧಿಕಾರಿ ಅಂದ್ರೆ ಇನ್ನೊಂದು ಕಡೆ ಘಟಪ್ರಭಾ ಮಲ್ಲಿಕಾರ್ಜುನ ಶ್ರೀಗಳು ನಾನು ಅಂತಿದ್ದಾರೆ. ಇದೆಲ್ಲದರ ಮಧ್ಯೆ ಮಠಕ್ಕೆ ಉತ್ತರಾಧಿಕಾರಿ ಅವಶ್ಯಕತೆ ಸದ್ಯ ಇಲ್ಲ ಎಂದು ಮಠದ ಉನ್ನತ ಸಮಿತಿ ಹೇಳಿದೆ. ಜತೆಗೆ ಸಭೆ ನಡೆಸಲು ಬಿಡುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿದೆ.
ನಾವೂ ಮಠದಲ್ಲಿ ಸಭೆ ನಡೆಸುತ್ತೇವೆ. ಮೂಜಗು ಶ್ರೀಗಳಿಗೆ ಮನವಿ ಸಲ್ಲಿಸಲು ನಮಗೂ ಅವಕಾಶ ಕೊಡಬೇಕು ಎಂದು ಮಲ್ಲಿಕಾರ್ಜುನ ಶ್ರೀ ಹೇಳುತ್ತಿದ್ದಾರೆ. ಮಠದಲ್ಲಿ ಯಾರಿಗೂ ಅವಕಾಶ ನೀಡಬೇಡಿ, ಮಠದ ಸುತ್ತಲೂ ಕಲಂ 144 ಜಾರಿ ಮಾಡಿ ಎಂದು ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪೀಠಾಧಿಪತಿ ಮೂಜಗೂ ಶ್ರಿಗಳು ಮನವಿ ಮಾಡಿದ್ದಾರೆ. ಪೊಲೀಸ್ ಇಲಾಖೆ ಯಾವ ನಿರ್ಧಾರ ತಗೆದುಕೊಳ್ಖುತ್ತದೆ ಎಂಬುದು ಕುತೂಹಲ ಮೂಡಿಸಿದೆ.