ಕರ್ನಾಟಕ

karnataka

ETV Bharat / city

ಸರಿಯಾದ ಬೆಲೆ ಸಿಗದೆ ಬೇಸತ್ತ ರೈತನಿಂದ ಬೆಳೆ ನಾಶ - ಲಾಕ್​ಡೌನ್​ ಪರಿಣಾಮ

ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದ ಹಿನ್ನೆಲೆ ಕಷ್ಟಪಟ್ಟು ಬೆಳೆಸಿದ್ದ ಮೆಣಸಿನಕಾಯಿ ಬೆಳೆಯನ್ನು ರೈತನೋರ್ವ ನಾಶ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಮುಕ್ಕಲ್​ ಗ್ರಾಮದಲ್ಲಿ ನಡೆದಿದೆ.

mukkal-farmer-destroyed-chilli-crops
ಬೆಳೆ ನಾಶ

By

Published : May 21, 2020, 11:52 AM IST

ಹುಬ್ಬಳ್ಳಿ: ಕಷ್ಟಪಟ್ಟು ಬೆಳೆದ ಮೆಣಸಿನಕಾಯಿ ಬೆಳೆಗೆ ಸರಿಯಾದ ಬೆಲೆ ಸಿಗದ ಹಿನ್ನೆಲೆ ರೈತನೋರ್ವ ಬೆಳೆ ನಾಶ ಮಾಡಿದ ಘಟನೆ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದಲ್ಲಿ ನಡೆದಿದೆ‌.

ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ನಾಶ ಮಾಡಿದ ರೈತ

ಬಸವರಾಜ ಸೋಲಾರಗೊಪ್ಪ ಎಂಬ ರೈತ ಎರಡು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದ. ಲಾಕ್​ಡೌನ್​ ಹಿನ್ನೆಲೆ ಹಸಿ ಮೆಣಸಿನಕಾಯಿಗೆ ಸರಿಯಾದ ಬೆಲೆ ಸಿಗದ ಹಿನ್ನೆಲೆ ನೊಂದ ರೈತ ಕಷ್ಟಪಟ್ಟು ಬೆಳೆಸಿದ್ದ ಬೆಳೆಯನ್ನು ಟ್ರ್ಯಾಕ್ಟರ್​ನಿಂದ ನಾಶ ಮಾಡಿದ್ದಾನೆ.

ಮೆಣಸಿನಕಾಯಿ ಬೆಳೆದ ರೈತರಿಗೆ ಸರ್ಕಾರ 15 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಆದರೆ ರೈತನ‌ ಕೈಗೆ ಘೋಷಣೆಯ ಹಣ ಇನ್ನೂ ಸೇರಿಲ್ಲ. ಒಂದು‌ ಕಡೆ ಪರಿಹಾರ ಇಲ್ಲ, ಇನ್ನೊಂದು ಕಡೆ ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ.

ABOUT THE AUTHOR

...view details