ಹುಬ್ಬಳ್ಳಿ: ಸದಾ ಮನೆ, ಮಕ್ಕಳು, ಪತಿ ಅಂತ ಸಂಸಾರದ ಜಂಜಾಡದಲ್ಲಿ ಬ್ಯುಸಿಯಾಗಿದ್ದ ಗೃಹಿಣಿಯರು ಇಂದು ರ್ಯಾಂಪ್ ಮೇಲೆ ಆಕರ್ಷಕವಾಗಿ ಹೆಜ್ಜೆ ಹಾಕಿದರು.
ವಿಡಿಯೋ: ನೋಡುಗರ ಮನ ಗೆದ್ದ ಮಿಸ್ಟರ್ & ಮಿಸಸ್ ಹುಬ್ಬಳ್ಳಿ ಫ್ಯಾಶನ್ ಶೋ - ಇನರ್ ವಿಲ್ ಕ್ಲಬ್ ಮಹಿಳಾ ದಿನಾಚರಣೆ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇನ್ನರ್ ವಿಲ್ ಕ್ಲಬ್ ಮಹಿಳಾ ದಿನಾಚರಣೆ ಅಂಗವಾಗಿ ಮಿಸ್ಟರ್ & ಮಿಸಸ್ ಹುಬ್ಬಳ್ಳಿ ಐಕಾನ್ -2021 ಸ್ಪರ್ಧೆ ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಗೃಹಣಿಯರು ನಾವು ಯಾವ ಮಾಡೆಲ್ಗಳಿಗೂ ಕಮ್ಮಿ ಇಲ್ಲ ಎನ್ನುವ ರೀತಿ ಕ್ಯಾಟ್ ವಾಕ್ ಮಾಡಿದರು.
ಮಿಸ್ಟರ್ & ಮಿಸಸ್ ಹುಬ್ಬಳ್ಳಿ ಐಕಾನ್
ಈ ಸ್ಪರ್ಧೆಯಲ್ಲಿ ಗೃಹಣಿಯರು ನಾವು ಯಾವ ಮಾಡೆಲ್ಗಳಿಗೂ ಕಮ್ಮಿ ಇಲ್ಲ ಎನ್ನುವ ರೀತಿ ಕ್ಯಾಟ್ ವಾಕ್ ಮಾಡಿದ್ದು ಕಂಡುಬಂತು. ರ್ಯಾಂಪ್ ಮೇಲೆ ಜವಾರಿ ಸ್ಟೈಲ್‌ನಿಂದ ಹಿಡಿದು ಎಲ್ಲಾ ರೀತಿ ಕ್ಯಾಸ್ಟೂಮ್ಗಳನ್ನು ಧರಿಸಿ ಮಿಂಚಿದರು.
ಮರಾಠಿ, ಬೆಂಗಾಳಿ ಸೇರಿದಂತೆ ದೇಶದ ವಿವಿಧ ಭಾಗದ ಸಂಪ್ರದಾಯಿಕ ಸಾರಿಯನ್ನುಟ್ಟ ಗೃಹಿಣಿಯರು ರ್ಯಾಂಪ್ ಮೇಲೆ ಝಗಮಗಿಸಿದರು. ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಪೂಜಾ ಮುಚಕಂಡಿ ಮೊದಲ ಸ್ಥಾನ ಪಡೆದರೆ, ರನ್ನರ್ ಆಫ್ ಸ್ಥಾನಕ್ಕೆ ಲಾವಣ್ಯ ಹೆಚ್. ಕೆ. ಆಯ್ಕೆಯಾದರು.
Last Updated : Mar 8, 2021, 10:57 PM IST