ಧಾರವಾಡ: ಗ್ರಾಹಕನ ಸೋಗಿನಲ್ಲಿ ಬಂದ ಯುವಕನೋರ್ವ ಅಂಗಡಿಯ ಗಲ್ಲಾ ಪೆಟ್ಟಿಗೆಗೆ ಕೈ ಹಾಕಿ ಐದೂವರೆ ಸಾವಿರ ರೂಪಾಯಿ ಎಗರಿಸಿ ಪರಾರಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ಟಿಕಾರೆ ರಸ್ತೆಯಲ್ಲಿನ ನವಭಾರತ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಯುವಕ ಸುತ್ತಲೂ ಗಮನಿಸಿ ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡು ಹಣ ಎಗರಿಸಿ ಪರಾರಿಯಾಗಿದ್ದಾನೆ.
ಗ್ರಾಹಕನ ಸೋಗಿನಲ್ಲಿ ಬಂದ ಯುವಕನಿಂದ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಧಾರವಾಡದ ಅಂಗಡಿಯಲ್ಲಿ ಕಳ್ಳತನ
ಗ್ರಾಹಕನ ಸೋಗಿನಲ್ಲಿ ಬಂದ ಯುವಕನೋರ್ವ ಅಂಗಡಿಯ ಗಲ್ಲಾ ಪೆಟ್ಟಿಗೆಯಿಂದ ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಗ್ರಾಹಕನ ಸೋಗಿನಲ್ಲಿ ಬಂದ ಯುವಕನಿಂದ ಕಳ್ಳತನ : ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಂಗಡಿಗೆ ಬಂದ ಯುವಕನನ್ನು ನೋಡಿ ಅಂಗಡಿ ಮಾಲೀಕರು ಗ್ರಾಹಕನೆಂದು ಭಾವಿಸಿದ್ದರು. ಆದರೆ ಚಾಲಾಕಿ ಕಳ್ಳ ತನ್ನ ಕೈ ಚಳಕ ತೋರಿಸಿ ಅಂಗಡಿಯಿಂದ ಹಣದ ಸಮೇತ ಪರಾರಿಯಾಗಿದ್ದಾನೆ. ಯುವಕ ಅಂಗಡಿಯ ಗಲ್ಲಾ ಪೆಟ್ಟಿಗೆಗೆ ಕೈ ಹಾಕಿ ಹಣ ಎಗರಿಸಿರುವ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:45 ವರ್ಷದ ವ್ಯಕ್ತಿ ಜೊತೆ 16ರ ಬಾಲೆಯ ಮದುವೆ, ಹೆಣ್ಣು ಮಗುವಿಗೆ ಜನ್ಮ; 22 ವರ್ಷದ ಯುವಕನೊಂದಿಗೆ ಪರಾರಿ!