ಧಾರವಾಡ :ಮತಾಂತರ ಕಾಯ್ದೆ ಅತ್ಯಂತ ಅವಶ್ಯಕವಾಗಿದೆ. ಆಸೆ, ಆಮಿಷವೊಡ್ಡಿ ಮತಾಂತರ ಮಾಡುವ ಕೆಲಸ ನಡೆದಿದೆ. ಅದು ತಪ್ಪು ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದರು.
ಆಮಿಷವೊಡ್ಡಿ ಮತಾಂತರ ಮಾಡುತ್ತಿರುವುದರಿಂದ ಕಾಯ್ದೆ ಜಾರಿಗೆ ತರುವುದು ಅತ್ಯಂತ ಅವಶ್ಯಕ : ಶಾಸಕ ಬೆಲ್ಲದ್ - ಮತಾಂತರ ಕಾಯ್ದೆ
ಈ ಕಾನೂನು ಜಾರಿಗೆ ತರುವ ಅವಶ್ಯಕತೆ ಇದೆ. ಗೋಹತ್ಯೆ ಕೂಡ ಸರಿಯಾಗಿ ಜಾರಿಗೆ ಬರುತ್ತದೆ. ಕಾಯ್ದೆ ಜಾರಿಗೆ ಬರಬೇಕಾದರೆ ಸ್ವಲ್ಪ ಸಮಯ ಹಿಡಿಯುತ್ತದೆ. ಕೋವಿಡ್ ಹಾಗೂ ಬೇರೆ ಬೇರೆ ಕಾರಣದಿಂದ ಸ್ವಲ್ಪ ತಡವಾಗಿದೆ..
ಶಾಸಕ ಅರವಿಂದ ಬೆಲ್ಲದ
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಜನರಿಗೆ ಧಾರ್ಮಿಕ ಸ್ವಾತಂತ್ರ್ಯ ಇದೆ. ಯಾರು ಯಾವುದೇ ಧರ್ಮ ಅನುಸರಿಸಬಹುದು. ಆದ, ತಂತ್ರ ಮಾಡಿ ಮತಾಂತರ ಮಾಡುವುದು ತಪ್ಪು. ಈ ರೀತಿ ಮತಾಂತರ ಮಾಡುವುದು ತಪ್ಪು ಎನ್ನುವುದು ನಮ್ಮ ಪಕ್ಷದ ಸಿದ್ಧಾಂತ ಎಂದರು.
ಈ ಕಾನೂನು ಜಾರಿಗೆ ತರುವ ಅವಶ್ಯಕತೆ ಇದೆ. ಗೋಹತ್ಯೆ ಕೂಡ ಸರಿಯಾಗಿ ಜಾರಿಗೆ ಬರುತ್ತದೆ. ಕಾಯ್ದೆ ಜಾರಿಗೆ ಬರಬೇಕಾದರೆ ಸ್ವಲ್ಪ ಸಮಯ ಹಿಡಿಯುತ್ತದೆ. ಕೋವಿಡ್ ಹಾಗೂ ಬೇರೆ ಬೇರೆ ಕಾರಣದಿಂದ ಸ್ವಲ್ಪ ತಡವಾಗಿದೆ. ಬೇಗನೆ ಅದನ್ನೂ ಸಹ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.