ಕರ್ನಾಟಕ

karnataka

ETV Bharat / city

ಧಾರವಾಡದ ಇಂದಿರಾ ಕ್ಯಾಂಟೀನ್‌ಗೆ​ ಶಾಸಕ ಅರವಿಂದ ಬೆಲ್ಲದ ಭೇಟಿ.. ಹೆಚ್ಚಿನ ಸುಧಾರಣೆ ಬಗ್ಗೆ ಒಲವು.. - ಬಿಜೆಪಿ ಶಾಸಕ ಅರವಿಂದ ಬೆಲ್ಲದ

ಇಂದಿರಾ ಕ್ಯಾಂಟೀನ್‌ಗಳಲ್ಲಿ ಗೋಲ್‌ಮಾಲ್ ಆರೋಪ ಕೇಳಿ ಬಂದ ಹಿನ್ನೆಲೆ ಧಾರವಾಡದ ಇಂದಿರಾ ಕ್ಯಾಂಟೀನ್​ಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅನಿರೀಕ್ಷಿತವಾಗಿ ಭೇಟಿ ನೀಡಿದರು.

ಧಾರವಾಡ ಕ್ಯಾಂಟೀನ್​ಗೆ ಶಾಸಕ ಬೆಲ್ಲದ ಭೇಟಿ

By

Published : Oct 6, 2019, 5:15 PM IST

ಧಾರವಾಡ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಗೋಲ್‌ಮಾಲ್ ಆರೋಪ ಕೇಳಿ ಬಂದ ಹಿನ್ನೆಲೆ ಧಾರವಾಡದ ಇಂದಿರಾ ಕ್ಯಾಂಟೀನ್​ಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅನಿರೀಕ್ಷಿತವಾಗಿ ಭೇಟಿ ನೀಡಿದರು.

ಧಾರವಾಡ ಕ್ಯಾಂಟೀನ್​ಗೆ ಶಾಸಕ ಬೆಲ್ಲದ ಭೇಟಿ..

ಮಿನಿ ವಿಧಾನಸೌಧ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಶಾಸಕ, ಕಟ್ಟಡದ ಗುಣಮಟ್ಟ, ಆಹಾರ ಪೂರೈಕೆ, ಸ್ವಚ್ಛತೆ ಕುರಿತು ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಮುಚ್ಚುವ ಬದಲಿಗೆ ಇಲ್ಲಿನ ವ್ಯವಸ್ಥೆ ಸುಧಾರಿಸಬೇಕಿದೆ.‌ ಮುಚ್ಚುವುದು ಬೇಡ, ‌ನಿತ್ಯ ಐನೂರು ಜನಕ್ಕೆ ನಿತ್ಯ ಊಟ ಕೊಡುತ್ತೇವೆ ಅಂತಾ ಲೆಕ್ಕ ತೋರಿಸುತ್ತಿದ್ದಾರೆ. ಆದ್ದರಿಂದ ಈಗಿರುವ ವ್ಯವಸ್ಥೆ ಸುಧಾರಿಸಿ ಮುಂದುವರಿಸಬೇಕಿದೆ. ಇಲ್ಲಿನ ವ್ಯವಸ್ಥೆ ಡಿಜಿಟಲೀಕರಣ ಮಾಡಬೇಕು. ಊಟಕ್ಕೆ ಬರುವವರ ಆಧಾರ ಸಂಖ್ಯೆ ಹಾಗೂ ಹೆಬ್ಬೆಟ್ಟಿನ ಸ್ಕ್ಯಾನಿಂಗ್ ಮಾಡುವ ವ್ಯವಸ್ಥೆ ಮಾಡಬೇಕು. ಆಗ ಮಾತ್ರ ಈ ಕ್ಯಾಂಟೀನ್‌ನಲ್ಲಿನ ಭ್ರಷ್ಟಾಚಾರ ನಿಲ್ಲಬಹುದು ಎಂದರು.

ABOUT THE AUTHOR

...view details