ಧಾರವಾಡ:ಸಚಿವ ಸ್ಥಾನ ನೀಡಿದ್ರೆ ಒಳ್ಳೆಯದು. ಇಲ್ಲದಿದ್ದರೆ ಯಾವ ಜವಾಬ್ದಾರಿ ನೀಡುತ್ತಾರೋ ಅದನ್ನು ಒಳ್ಳೆಯ ರೀತಿಯಿಂದ ಮಾಡುವೆ ಎಂದು ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಸಚಿವ ಸ್ಥಾನ ಕೇಳಿಲ್ಲ, ನೀಡಿದರೆ ನಿಭಾಯಿಸುವೆ; ಶಾಸಕ ಬೆಲ್ಲದ
ಎಲ್ಲಾ ಎಂಎಲ್ಎಗಳಿಗೂ ಸಚಿವರಾಗೋ ಆಕಾಂಕ್ಷೆ ಇರುತ್ತದೆ. ಯಾರನ್ನು ತಗೋಬೇಕು, ಯಾರನ್ನ ಬಿಡಬೇಕು ಎಂಬುದನ್ನು ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ನನಗಿನ್ನೂ ವಯಸ್ಸಿದೆ. ಪಾಲಿಟಿಕ್ಸ್ ಇಸ್ ಎ ಲಾಂಗ್ ರೇಸ್ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.
ಇನ್ನು, ಏಳು ಜನರಿಗೆ ಸಚಿವ ಸ್ಥಾನ ಸಿಗಲಿದೆ ಅಂತ ಮಾಧ್ಯಮಗಳಿಂದ ಗೊತ್ತಾಗಿದೆ. ನಮ್ಮ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ. ಎಲ್ಲಾ ಎಂಎಲ್ಎಗಳಿಗೂ ಸಚಿವರಾಗೋ ಆಕಾಂಕ್ಷೆ ಇರುತ್ತದೆ. ಯಾರನ್ನು ತಗೋಬೇಕು, ಯಾರನ್ನ ಬಿಡಬೇಕು ಎಂಬುದನ್ನು ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ನನಗಿನ್ನೂ ವಯಸ್ಸಿದೆ, ಪಾಲಿಟಿಕ್ಸ್ ಇಸ್ ಎ ಲಾಂಗ್ ರೇಸ್ ಎಂದರು.
ಮೂಲ ಬಿಜೆಪಿಗರಿಗೆ ಮನ್ನಣೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷಕ್ಕಾಗಿ ಮೊದಲಿನಿಂದಲೂ ದುಡಿದವರಿಗೆ ಸಚಿವ ಸ್ಥಾನ ಕೊಡಬೇಕು ಅಂತ ಇರುತ್ತದೆ. ಆದರೆ, ರಾಜಕಾರಣ ಅಂದರೆ ಬ್ಯಾಲೆನ್ಸ್ ಮಾಡಲೇಬೇಕಾಗುತ್ತದೆ. ಆ ಬ್ಯಾಲೆನ್ಸ್ ಮಾಡುವ ವಿಚಾರವಾಗಿ ಸಿಎಂ ನಿರ್ಧಾರ ಮಾಡುತ್ತಾರೆ ಎಂದರು.