ಧಾರವಾಡ: ಇಡೀ ದೇಶದಲ್ಲಿ ಕರ್ನಾಟಕ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಚರ್ಚೆ ಆಗುತ್ತಿದೆ. ಆದರೆ ಚರ್ಚೆಗೆ ಯಾವುದೇ ದಾಖಲೆ ಕೊಡುತ್ತಿಲ್ಲ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಬಿಟ್ ಕಾಯಿನ್ ಚರ್ಚೆಗೆ ಯಾವುದೇ ದಾಖಲೆ ಕೊಡುತ್ತಿಲ್ಲ: ಸಚಿವ ಮುನೇನಕೊಪ್ಪ
ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ಮತ್ತು ನಮ್ಮ ಪಕ್ಷದವರು ಇದ್ದಾರೆಂದು ಕೆಲವರು ಆರೋಪಿಸುತ್ತಿದ್ದಾರೆ. ಯಾವ ದಾಖಲೆಯನ್ನೂ ಸರ್ಕಾರ ಮತ್ತು ಮಾಧ್ಯಮಕ್ಕೆ ನೀಡುತ್ತಿಲ್ಲ. ನಮ್ಮ ಸಿಎಂ ಯಾವುದೇ ತನಿಖೆಗೆ ಸಿದ್ದ ಇರುವುದಾಗಿ ಹೇಳಿದ್ದಾರೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ನಮ್ಮ ಪಕ್ಷದವರು ಇದ್ದಾರೆಂದು ಕೆಲವರು ಆರೋಪಿಸುತ್ತಿದ್ದಾರೆ. ಯಾವ ದಾಖಲೆಯನ್ನೂ ಸರ್ಕಾರ ಮತ್ತು ಮಾಧ್ಯಮಕ್ಕೆ ನೀಡುತ್ತಿಲ್ಲ. ನಮ್ಮ ಸಿಎಂ ಯಾವುದೇ ತನಿಖೆಗೆ ಸಿದ್ದ ಎಂದು ಹೇಳಿದ್ದಾರೆ. ನಿಮ್ಮಲ್ಲಿರುವ ದಾಖಲೆ ಬಿಡುಗಡೆ ಮಾಡಿ ಅಂತಾ ಅವರೇ ಹೇಳಿದ್ದಾರೆ ಎಂದರು.
ಯಾವುದೇ ಪಕ್ಷದ ಯಾವುದೇ ಮುಖಂಡ ಇರಲಿ ಅವರು ದಾಖಲೆಗಳನ್ನು ನೀಡಲಿ. ಯಾರೇ ಇದ್ದರೂ ಅವರ ಮೇಲೆ ಕಾನೂನಾತ್ಮಕ ಕ್ರಮ ಆಗುತ್ತದೆ. ಬಿಟ್ ಕಾಯಿನ್ ಬಗ್ಗೆ ಬಹಳ ಚರ್ಚೆ ಆಗುತ್ತಿದೆ. 25ಕ್ಕೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಅಲ್ಲಿ ಏನು ಚರ್ಚೆ ಆಗುತ್ತೆ ಅದನ್ನು ನೋಡಿಕೊಂಡು ಮಾಧ್ಯಮಗಳಿಗೆ ಹೇಳುತ್ತೇವೆ ಎಂದರು.