ಹುಬ್ಬಳ್ಳಿ:ಕೋವಿಡ್ ನಿರ್ವಹಣೆ ವಿಚಾರದಲ್ಲಿ ಕೋರ್ಟ್ ನಿರ್ದೇಶನವನ್ನು ಸ್ವಾಗತಿಸುತ್ತೇವೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಕೋರ್ಟ್ ನಿರ್ದೇಶನ ಸ್ವಾಗತಿಸುವುದಾಗಿ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ಓದಿ: ರೈಲ್ವೆ ಪ್ರಯಾಣಿಕರಿಗೆ ನಕಲಿ ಕೊರೊನಾ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದ ಆರೋಪಿ ಬಂಧನ
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೋರ್ಟ್ ಸೂಚನೆ ಮೇಲೆಯೇ ಎಲ್ಲವೂ ನಡೆಯುತ್ತಿಲ್ಲ. ನಮ್ಮ ಪ್ರಯತ್ನ ಮೀರಿ ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ಕೈಮೀರಿ ಈಗ ಕೋವಿಡ್ ಹೆಚ್ಚಾಗಿದ್ದು, ನಾವು ಅದರ ನಿಯಂತ್ರಣಕ್ಕೆ ಕೆಲಸ ಮಾಡುತ್ತಿದ್ದೇವೆ. ಕೋರ್ಟ್ ನಿರ್ದೇಶನ ಬರುವ ತನಕ ಎಚ್ಚೆತ್ತುಕೊಳ್ಳಬೇಕು ಅಂತ ಏನಿಲ್ಲ. ನಮ್ಮ ಕೆಲಸವನ್ನ ನಾವು ಮಾಡುತ್ತಿದ್ದೇವೆ ಎಂದರು.
ಕಳೆದ ವಾರ ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗಿತ್ತು. ಚಾಮರಾಜನಗರದ ಘಟನೆಯನ್ನ ನೋಡಿ ಅದನ್ನ ನೀಗಿಸಲು ಪ್ರಯತ್ನ ಮಾಡಿದ್ದೆವು. 865 ರಿಂದ 965 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗಿತ್ತು, ಆದರೀಗ 1,015 ಮೆಟ್ರಿಕ್ ಟನ್ ರಾಜ್ಯಕ್ಕೆ ಅಲೋಕೇಟ್ ಆಗಿದೆ. ಬೇರೆ ಜಿಲ್ಲೆಗಳಲ್ಲಿ ಕೊರತೆ ಇತ್ತು, ಅದನ್ನ ಹಂಚಿಕೆ ಮಾಡುವ ಕಾರ್ಯ ನಡೆದಿದೆ. ಇದರ ನಂತರ ಇದೀಗ ನಮಗೆ ಆಕ್ಸಿಜನ್ ಕೊರತೆ ಆಗಲ್ಲ ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲಿ ತಯಾರಾಗುವ ಆಕ್ಸಿಜನ್ ನಮ್ಮ ರಾಜ್ಯಕ್ಕೆ ಸೀಮಿತ ಆಗಬೇಕು. ಈ ಹಿನ್ನೆಲೆ ಕೇಂದ್ರ ಸರ್ಕಾರಕ್ಕೆ ಸಹ ನಾವು ಮನವಿ ಮಾಡಿದ್ದೇವೆ. 1100 ಮೆಟ್ರಿಕ್ ಟನ್ ನಮ್ಮಲ್ಲೇ ತಯಾರಾಗುತ್ತೆ. ಹೀಗಾಗಿ ಅದು ನಮ್ಮ ರಾಜ್ಯಕ್ಕೆ ಸಿಗಬೇಕು, ಅದರ ಬಗ್ಗೆ ಮಾತನಾಡಿದ್ದೇನೆ ಎಂದರು. ಜಮ್ಶೆಡ್ಪುರ್, ದೆಹಲಿಯಿಂದಲೂ ನಮಗೆ ಆಕ್ಸಿಜನ್ ಬಂದಿದೆ, ಒಂದು ಟ್ಯಾಂಕರ್ ನಮ್ಮ ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ಸೀಮಿತವಾಗಲಿದೆ. ಇದೇ 16 ನೇ ತಾರೀಖಿಗೆ ಬರಲಿದೆ. L&T ಕಂಪನಿ 2 ಆಕ್ಸಿಜನ್ ಟ್ಯಾಂಕ್ ಸ್ಥಾಪಿಸಲಿದೆ. ಲಾಕ್ಡೌನ್ ಮಾಡಿದರೂ ಎಲ್ಲವನ್ನ ಮೀರಿ ಹೋಗುತ್ತಿದೆ. ಹೀಗಾಗಿ ನಾವು ಸಹ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಕೇವಲ ಸಿಟಿಗೆ ಮಾತ್ರ ಸೀಮಿತವಾಗಿದ್ದ ಕೋವಿಡ್ ಅಂತ್ಯಕ್ರಿಯೆ ಇದೀಗ ಗ್ರಾಮೀಣ ಭಾಗಕ್ಕೂ ಸಹ ಬೇಡಿಕೆ ಹೆಚ್ಚಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲೂ ಉಚಿತವಾಗಿ ಕೋವಿಡ್ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿದ್ದೇವೆ. ತಾಲೂಕು ಮಟ್ಟದ ತಹಶೀಲ್ದಾರ್ ರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಿ ಇನ್ಮುಂದೆ ಉಚಿತವಾಗಿ ಅಂತ್ಯಕ್ರಿಯೆ ನಡೆಸಲಾಗುವುದು ಸಚಿವ ಶೆಟ್ಟರ್ ಅಭಯ ನೀಡಿದರು.