ಧಾರವಾಡ: ಧಾರಾಕಾರ ಮಳೆ ಸುರಿದು ಜಲಾವೃತವಾದ ಸ್ಥಳಗಳಿಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.
ಧಾರಾಕಾರ ಮಳೆಯಿಂದ ಜಲಾವೃತಗೊಂಡ ಸ್ಥಳಗಳಿಗೆ ಸಚಿವ ಶೆಟ್ಟರ್ ಭೇಟಿ - heavy rain Dharwad
ಧಾರವಾಡದಲ್ಲಿ ಧಾರಾಕಾರ ಮಳೆ ಸುರಿದು ಜಲಾವೃತವಾದ ಸ್ಥಳಗಳಿಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.
ಧಾರವಾಡದಲ್ಲಿ ಧಾರಕಾರ ಮಳೆ
ಧಾರವಾಡದ ಚನ್ನಬಸವೇಶ್ವರ ನಗರ, ಗರಗ ಮತ್ತು ತಡಕೊಡ ಮಧ್ಯದ ತುಪ್ಪರಿ ಹಳ್ಳವನ್ನು ಸಚಿವ ಜಗದೀಶ ಶೆಟ್ಟರ್ ವೀಕ್ಷಣೆ ಮಾಡಿದರು. ಈ ವೇಳೆ ಸ್ಥಳೀಯ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದು, 15 ವರ್ಷಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಶೆಟ್ಟರ್, ಸಮಸ್ಯೆ ಬಗೆಹರಸುವುದಾಗಿ ಭರವಸೆ ನೀಡಿದರು.