ಹುಬ್ಬಳ್ಳಿ:ಸಾರಿಗೆ ನೌಕರರ ಮುಷ್ಕರ ಕುತಂತ್ರ ವ್ಯಕ್ತಿಗಳ ಷಡ್ಯಂತ್ರ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಸಾರಿಗೆ ಸಂಸ್ಥೆ ಅದೊಂದು ನಿಗಮ. ರಾಜ್ಯದಲ್ಲಿ ಈ ರೀತಿಯ 116 ನಿಗಮಗಳಿವೆ. ಇವರ ಬೇಡಿಕೆಗೆ ಬಗ್ಗಿದ್ರೆ ಉಳಿದವರೂ ಹೋರಾಟಕ್ಕಿಳೀತಾರೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿದ್ರೆ ಎಲ್ಲರನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕಾಗುತ್ತೆ. ಹಾಗಾದಲ್ಲಿ ಸರ್ಕಾರದ ಬಜೆಟ್ ಪೂರ್ತಿ ಇವರಿಗೆ ಕೊಡಬೇಕಾಗುತ್ತೆ. ಇದು ಸಾರಿಗೆ ಕಾರ್ಮಿಕರು ಮಾಡ್ತಿರೋ ಹೋರಾಟವಲ್ಲ. ಸಾರಿಗೆ ಮುಷ್ಕರ ಕೆಲ ಕುತಂತ್ರ ವ್ಯಕ್ತಿಗಳ ಷಡ್ಯಂತ್ರ. ತಾವು ಹಿಂದೆ ಇದ್ದುಕೊಂಡು ಸಾರಿಗೆ ನೌಕರರನ್ನು ಮುಂದೆಬಿಟ್ಟಿದ್ದಾರೆ ಎಂದರು.