ಧಾರವಾಡ: ನಾನು ಕಾಂಗ್ರೆಸ್ - ಜೆಡಿಎಸ್‌ನಲ್ಲಿ ಇಲ್ಲ ಆ ಬಗ್ಗೆ ಸಿದ್ದರಾಮಯ್ಯ ಅವರೇ ಹೇಳಬೇಕು. ನಾವು ಏನಿದ್ದರೂ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದು ನಗರದಲ್ಲಿ ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ.
ನಾನು ಕಾಂಗ್ರೆಸ್ - ಜೆಡಿಎಸ್‌ನಲ್ಲಿ ಇಲ್ಲ: ಸಚಿವ ಬೈರತಿ ಬಸವರಾಜ್
ಬೆಳಗಾವಿ ಕಾರ್ಯಕಾರಿಣಿ ಸಭೆಯಲ್ಲಿ ದೇಶ ಮತ್ತು ರಾಜ್ಯದ ಬಗ್ಗೆ ಚಿಂತನೆ ಆಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು, ಅದು ಯಾವಾಗ ಬೇಕಾದಾಗ ತೀರ್ಮಾನ ಆಗಲಿದೆ ಎಂದು ಸಚಿವ ಬೈರತಿ ಬಸವರಾಜ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಎಲ್ಲಿಯೂ ಗೊಂದಲ ನಿರ್ಮಿಸಿಕೊಳ್ಳುತ್ತಿಲ್ಲ ಅವರವರ ಕಾಲ ಎಳೆಯುವ ಕೆಲಸ ನಾವು ಮಾಡುವುದಿಲ್ಲ ಎಂದರು. ಬೆಳಗಾವಿ ಕಾರ್ಯಕಾರಣಿ ಸಭೆಯಲ್ಲಿ ದೇಶ ಮತ್ತು ರಾಜ್ಯದ ಬಗ್ಗೆ ಚಿಂತನೆ ಆಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು, ಅದು ಯಾವಾಗ ಬೇಕಾದಾಗ ತೀರ್ಮಾನ ಆಗಲಿದೆ ಎಂದರು.
3 - 4 ಜನರಿಗೆ ಸಚಿವರನ್ನು ಮಾಡುವುದು ಸಿಎಂ ಅವರ ಮನಸ್ಸಿನಲ್ಲಿದೆ. ಅವರು ಕೊಟ್ಟ ಮಾತು ಯಾವತ್ತೂ ತಪ್ಪುವುದಿಲ್ಲ, ಯಾವುದೇ ಅಸಮಾಧಾನ ಇಲ್ಲ ಸಚಿವ ಸಂಪುಟ ವಿಸ್ತರಣೆ ಯಾವಾಗ, ಯಾರಿಗೆ ಸಿಗುತ್ತೆ ಎನ್ನುವ ವಿಚಾರ ಇವತ್ತು ಸಂಜೆಯೊಳಗೆ ಹೊರ ಬೀಳುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.