ಹುಬ್ಬಳ್ಳಿ:ಯಾವುದೇ ಪಾಸ್ ಮತ್ತು ಅನುಮತಿ ಇಲ್ಲದೇ,ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೊರಟ್ಟಿದ್ದ 130 ವಲಸೆ ಕಾರ್ಮಿಕರಿದ್ದ ಎರಡು ಕಂಟೇನರ್ಗಳನ್ನು ಹುಬ್ಬಳ್ಳಿಯ ಗಬ್ಬೂರ್ ಬೈ ಪಾಸ್ನಲ್ಲಿ ತಡೆದು ಪರಿಶೀಲನೆ ನಡೆಸಲಾಯಿತು.
ಬೆಂಗಳೂರು ಟು ಉತ್ತರ ಪ್ರದೇಶ: ಕಂಟೈನರ್ಗಳಗಳ ಪರಿಶೀಲನೆ, ಸಿಕ್ಕಿಬಿದ್ದ 130 ಕಾರ್ಮಿಕರು - ಕಂಟೈನರ್ ತಡೆದು ಪರಿಶೀಲಿಸಿದ ಹುಬ್ಬಳ್ಳಿ ಪೊಲೀಸರು
ಅನಧಿಕೃತವಾಗಿ ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ವಲಸೆ ಕಾರ್ಮಿಕರನ್ನು ತಡೆದು ಬೆಂಡಿಗೇರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.
ಕಾರ್ಮಿಕರು
ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅರುಣ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವವರೆಗೂ ಯಾವುದೇ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಿಲ್ಲ.
ವಲಸೆ ಕಾರ್ಮಿಕರ ಪಾಸ್ ಹಾಗೂ ಅನುಮತಿ ಪಡೆಯದೇ ಕಂಟೇನರ್ ಬಾಡಿಗೆ ಮಾಡಿಕೊಂಡು ತವರಿಗೆ ಹೊರಟಿರುವ ಮಾಹಿತಿ ಕಲೆಹಾಕಿದ ಪೊಲೀಸರು, ಗಬ್ಬೂರು ಬಳಿ ತಡೆದು ತಪಾಸಣೆ ನಡೆಸಿ ದಾಖಲೆ ಪರಿಶೀಲಿಸಿದರು. ಜಿಲ್ಲಾಡಳಿತವು ಶ್ರಮಿಕ್ ಎಕ್ಸ್‌ಪ್ರೆಸ್ ಮೂಲಕ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡುವ ಸಾಧ್ಯತೆಗಳು ಹೆಚ್ಚಾಗಿವೆ.