ಹುಬ್ಬಳ್ಳಿ: ಮೂರನೇ ಕಣ್ಣು ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಯುವ ನಿರ್ದೇಶಕ ನಜೀರ್ ಕೆ.ಎನ್., 'ಮೀರಾ' ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ.
ಸೆಪ್ಟಂಬರ್ನಲ್ಲಿ 'ಮೀರಾ' ಸಿನಿಮಾ ಚಿತ್ರೀಕರಣ ಆರಂಭ - ಮೂರನೇ ಕಣ್ಣು ಸಿನಿಮಾ
ಮೂರನೇ ಕಣ್ಣು ಸಿನಿಮಾ ಖ್ಯಾತಿಯ ನಿರ್ದೇಶಕ ನಜೀರ್ ಕೆ.ಎನ್. ತಮ್ಮ ಎರಡನೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ.

ಸೆಪ್ಟಂಬರ್ನಲ್ಲಿ 'ಮೀರಾ' ಸಿನಿಮಾದ ಚಿತ್ರೀಕರಣ ಆರಂಭ
ಸೆಪ್ಟಂಬರ್ನಲ್ಲಿ 'ಮೀರಾ' ಸಿನಿಮಾದ ಚಿತ್ರೀಕರಣ ಆರಂಭ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಾಚಾರದ ವಿರುದ್ಧ ಸಮಾಜಕ್ಕೆ ಸಂದೇಶ ಸಾರುವ ಮೀರಾ ಚಿತ್ರೀಕರಣ ಮುಂದಿನ ತಿಂಗಳಿನಿಂದ ನಡೆಯಲಿದೆ. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದ್ದು, ಉತ್ತರ ಕರ್ನಾಟಕದ ಯುವ ಪ್ರತಿಭೆ ಸೈನಾ ಧರಿಗೌಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸಂಗೀತ ಸಂಯೋಜನೆಯನ್ನು ರಾಧಾಕೃಷ್ಣ ಬಸ್ರೂರ್, ಛಾಯಾಗ್ರಹಣ ಜೀವಿ ನಾಗರಾಜ್, ಸಂಕಲನ ಡಿಜಿ ನಾಗರಾಜ್ ಮಾಡಲಿದ್ದಾರೆ ಎಂದರು.
ನಾಯಕಿ ಸೈನಾ ಧರಿಗೌಡ ನಾಯಕಿಯಾಗಿ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುವುದಾಗಿ ತಿಳಿಸಿದ್ದಾರೆ ಎಂದರು.