ಕರ್ನಾಟಕ

karnataka

ETV Bharat / city

ನಾನು ಮಾಸ್ಕ್​ ಹಾಕಲ್ಲ ಎಂದು ಕಿರಿಕ್ ಮಾಡಿದ ವ್ಯಕ್ತಿಯಿಂದ ದಂಡ ವಸೂಲಿ

ಧಾರವಾಡ ಜಿಲ್ಲೆಯಲ್ಲಿ ಕಠಿಣ ಲಾಕ್​ಡೌನ್ ಹಿನ್ನೆಲೆ 8 ಗಂಟೆಯವರೆಗೆ ಮಾತ್ರ ಓಡಾಟಕ್ಕೆ ಅವಕಾಶವಿದೆ. ಆದರೆ, 11 ಗಂಟೆಯಾದರೂ ಜನರ ಓಡಾಟ ಮಾತ್ರ ನಿಲ್ಲುತ್ತಿಲ್ಲ. ಹೀಗಾಗಿ, ಪೊಲೀಸರು ದಂಡದ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ..

hubli
ನಾನು ಮಾಸ್ಕ್​ ಹಾಕಲ್ಲ ಎಂದ ಕಿರಿಕ್ ಮಾಡಿದ ವ್ಯಕ್ತಿಯಿಂದ ದಂಡ ವಸೂಲಿ

By

Published : May 24, 2021, 1:47 PM IST

ಹುಬ್ಬಳ್ಳಿ:ಹೆಲ್ಮೆಟ್ ಹಾಕಿಕೊಂಡಿದ್ದೇನೆ, ನನಗೆ ಮಾಸ್ಕ್ ಅವಶ್ಯಕತೆ ಇಲ್ಲ ಎಂದು ಕಿರಿಕ್ ಮಾಡಿದ ವ್ಯಕ್ತಿಯಿಂದ ಪೊಲೀಸರು ಕೊನೆಗೂ‌ ದಂಡ ಕಟ್ಟಿಸಿಕೊಂಡು ಕಳುಹಿಸಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.

ನಾನು ಮಾಸ್ಕ್​ ಹಾಕಲ್ಲ ಎಂದು ಕಿರಿಕ್ ಮಾಡಿದ ವ್ಯಕ್ತಿಯಿಂದ ದಂಡ ವಸೂಲಿ

ನಗರದ ಚೆನ್ನಮ್ಮ ವೃತ್ತದಲ್ಲಿ ವಾಹನ ತಪಾಸಣೆ ಮಾಡುವಾಗ ಹೆಲ್ಮೆಟ್ ಹಾಕಿಕೊಂಡು ಹೊರಟ್ಟಿದ್ದ ವ್ಯಕ್ತಿಯೊಬ್ಬ ಮಾಸ್ಕ್​ ಧರಿಸಿರಲಿಲ್ಲ. ಆಗ ಪೊಲೀಸರು ತಡೆದು ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಾರೆ.

ಈ ವೇಳೆ ಆ ವ್ಯಕ್ತಿ ನಾನು ಶಿವಕೃಪ ಆಸ್ಪತ್ರೆಯ ದೇವರಾಯ ನಾಯಕ್. ನಾನು ಮಾಸ್ಕ್​ ಹಾಕಲ್ಲ, ನೀವು ಏನ್ ಮಾಡ್ಕೋತೀರೋ ಮಾಡ್ಕೊಳ್ಳಿ. ನನ್ನ ಹತ್ರ ಜಗದೀಶ್ ಶೆಟ್ಟರ್, ಪ್ರಸಾದ್ ಅಬ್ಬಯ್ಯ ಅವರ ನಂಬರ್ ಇದೆ. ನಿಮ್ಮ ಕಮಿಷನರ್ ನಂಬರ್ ಕೊಡಿ, ನಾನು ಮಾತನಾಡುತ್ತೇನೆ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ.

ಪೊಲೀಸರು ನೀವು ಯಾರಾದರೇನು? ಮೊದಲು ದಂಡ ಕಟ್ಟಿ ಹೋಗಿ‌ ಎಂದು ತರಾಟೆಗೆ ತಗೆದುಕೊಂಡರು. ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲಾಗದೆ ದಂಡ ಕಟ್ಟಿದ್ದಾನೆ.

ಬೇಕಾಬಿಟ್ಟಿ ಓಡಾಡುವ ಯುವಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಇಂದಿನಿಂದ ಕಂಪ್ಲೀಟ್ ಲಾಕ್​ಡೌನ್ ಹಿನ್ನೆಲೆ ನಗರದಲ್ಲಿ ಬೇಕಾಬಿಟ್ಟಿ ಓಡಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಮಾತ್ರೆ ತರುವ ನೆಪ ಹೇಳಿ ಕಾರಿನಲ್ಲಿ ಮೂವರು ಯುವಕರು ಹೋಗುತ್ತಿದ್ದರು. ಈ ವೇಳೆ ಪೊಲೀಸರು ಕಾರಿನಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿದೆ ಎಂದು ಹೇಳಿ ಇನ್ನಿಬ್ಬರನ್ನು ಠಾಣೆಗೆ ಕರೆದೊಯ್ದರು.

ಧಾರವಾಡ ಜಿಲ್ಲೆಯಲ್ಲಿ ಕಠಿಣ ಲಾಕ್​ಡೌನ್ ಹಿನ್ನೆಲೆ 8 ಗಂಟೆಯವರೆಗೆ ಮಾತ್ರ ಓಡಾಟಕ್ಕೆ ಅವಕಾಶವಿದೆ. ಆದರೆ, 11 ಗಂಟೆಯಾದರೂ ಜನರ ಓಡಾಟ ಮಾತ್ರ ನಿಲ್ಲುತ್ತಿಲ್ಲ. ಹೀಗಾಗಿ, ಪೊಲೀಸರು ದಂಡದ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ.

ಓದಿ:ಗ್ರಾಮೀಣ ಭಾಗದಲ್ಲಿ ಕೊರೊನಾ ಏರಿಕೆ- ಮರಣ ಪ್ರಮಾಣ ಇಳಿಕೆ: ಸಚಿವ ಸುರೇಶ್ ಕುಮಾರ್

ABOUT THE AUTHOR

...view details