ಹುಬ್ಬಳ್ಳಿ:ಕೈಯಲ್ಲಿ ಕ್ವಾರಂಟೈನ್ ಸೀಲ್ ಇದ್ದರೂ ಕೂಡ ಬಸ್ಸಿನಲ್ಲಿ ಪ್ರಯಾಣ ಮಾಡಲು ಬಂದಿದ್ದ ವ್ಯಕ್ತಿಯೊಬ್ಬ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಕೈಯಲ್ಲಿ ಹೋಮ್ ಕ್ವಾರಂಟೈನ್ ಸೀಲ್ ಇದ್ದರೂ ಬಸ್ ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿ - quarantine center
ಕೊರೊನಾ ಪರೀಕ್ಷೆಗೆಂದು ನಗರದ ಕಿಮ್ಸ್ ಆಸ್ಪತ್ರಗೆ ಆಗಮಿಸಿದ್ದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಹೋಮ್ ಕ್ವಾರಂಟೈನ್ ಸೀಲ್ ಹಾಕಿ ಕಳುಹಿಸಲಾಗಿತ್ತು. ಬಳಿಕ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ಕೈಯಲ್ಲಿ ಹೋಮ್ ಕ್ವಾರಂಟೈನ್ ಸೀಲ್ ಕಂಡು ಸಾರಿಗೆ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ವ್ಯಕ್ತಿಯನ್ನು ಪ್ರಯಾಣ ಮಾಡದಂತೆ ತಡೆದು ಕಳುಹಿಸಿದ್ದಾರೆ.
ಕುಂದಗೋಳ ತಾಲೂಕಿನ ಹೊಸಹಳ್ಳಿ ಗ್ರಾಮದ ಮಂಜುನಾಥ ದೊಡ್ಡಮನಿ ಎಂಬಾತನ ಕೈಯಲ್ಲಿ ಹೋಮ್ ಕ್ವಾರಂಟೈನ್ ಸೀಲ್ ಇದ್ದರೂ ಕೂಡ ಮನೆಯಲ್ಲಿರದೇ ಬಸ್ಸಿನಲ್ಲಿ ಪ್ರಯಾಣ ಮಾಡಲು ಬಂದಿದ್ದು, ಇದೇ ವೇಳೆ, ಹುಬ್ಬಳ್ಳಿ ಹೊಸೂರ ಬಸ್ ನಿಲ್ದಾಣ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಆತನನ್ನು ತಡೆದು ಪ್ರಯಾಣಕ್ಕೆ ಅನುಮತಿ ನೀಡದೆ ನಿಲ್ಲಿಸಿದರು.
ಇನ್ನೂ ಆ ವ್ಯಕ್ತಿಗೆ ಇಂದು ಹೋಮ್ ಕ್ವಾರಂಟೈನ್ ಸೀಲ್ ಹಾಕಲಾಗಿದ್ದು, ಆತ ಊರಿಗೆ ಪ್ರಯಾಣಿಸಲು ಮುಂದಾಗಿರುವುದು ಸಿಬ್ಬಂದಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಂಜುನಾಥ ದೊಡ್ಡಮನಿ ಎಂಬುವ ವ್ಯಕ್ತಿ ಇಂದು ಕಿಮ್ಸ್ ಆಸ್ಪತ್ರೆಗೆ ಕೋವಿಡ್-19 ಟೆಸ್ಟ್ ಮಾಡಿಸಲು ಬಂದಿದ್ದರು. ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ 14 ದಿನ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಸೀಲ್ ಹಾಕಿದ್ದು, ಆತನು ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ಹಾಗೂ ಸಾರಿಗೆ ಸಂಸ್ಥೆ ಸಿಬ್ಬಂದಿ ತಡೆದು ಪ್ರಯಾಣಕ್ಕೆ ಅನುಮತಿ ಕೊಡದೇ ಕಳುಹಿಸಿದ್ದಾರೆ.