ಕರ್ನಾಟಕ

karnataka

ETV Bharat / city

ಎಸ್​​ಬಿಐ ಯೊನೊ ಆ್ಯಪ್ ಅಪ್ಡೇಟ್ ನೆಪ: ಹುಬ್ಬಳಿಯ ಮಹಿಳೆಗೆ ಲಕ್ಷಾಂತರ ರೂ. ವಂಚನೆ - Man Fraud to Woman in the Name of SBI YONO App Update in Hubli

ಎಸ್​​​ಬಿಐನ ಯೊನೊ ಆ್ಯಪ್ ಅಪ್ಡೇಟ್ ಮಾಡಬೇಕು ಎಂದು ಸಂದೇಶ ಕಳುಹಿಸಿದ ವ್ಯಕ್ತಿ, ಧಾರವಾಡದ ಡಾ. ಅನುಶ್ರೀ ಅಗ್ನಿಹೋತ್ರ ಅವರ ಬ್ಯಾಂಕ್‌ ಖಾತೆಯಿಂದ 3.94 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಾನೆ.

ಹುಬ್ಬಳ್ಳಿ  ಸೈಬರ್ ಪೊಲೀಸ್ ಠಾಣೆ
ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆ

By

Published : Jan 8, 2022, 9:04 AM IST

ಹುಬ್ಬಳ್ಳಿ:ಎಸ್​​​ಬಿಐನ ಯೊನೊ ಆ್ಯಪ್ ಅಪ್ಡೇಟ್ ಮಾಡಬೇಕು ಎಂದು ಕರೆ ಮಾಡಿದ ವ್ಯಕ್ತಿ ಧಾರವಾಡ ಮಹಿಳೆಯೊಬ್ಬರಿಗೆ 3.94.690 ರೂ. ವಂಚಿಸಿದ್ದಾನೆ.

ಧಾರವಾಡ ಡಾ. ಅನುಶ್ರೀ ಅಗ್ನಿಹೋತ್ರ ಎಂಬುವರಿಗೆ ಅಪರಿಚಿತ ವ್ಯಕ್ತಿ ನಿಮ್ಮ ಎಸ್​​ಬಿಐ ಆ್ಯಪ್ ಸದ್ಯದಲ್ಲೇ ಸ್ಥಗಿತವಾಗುತ್ತದೆ. ತಕ್ಷಣ ನೀವು ಆ್ಯಪ್​​ ಅಪ್ಡೇಟ್​​ ಮಾಡಬೇಕು ಎಂದು ಸಂದೇಶ ಕಳುಹಿಸಿದ್ದಾನೆ. ಸಂದೇಶದಲ್ಲಿರುವ ಲಿಂಕ್ ನಂಬಿದ ಮಹಿಳೆ ಲಿಂಕ್​ಗೆ ಪಾನ್​​ ಕಾರ್ಡ್ ನಂಬರ್, ಜನ್ಮ ದಿನಾಂಕ ಮತ್ತು ಒಟಿಪಿ ಹಾಕಿ ಸಬ್​ಮಿಟ್ ಮಾಡಿದ್ದಾರೆ.

ಅದಾದ ಬಳಿಕ ಅವರ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣವನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ: ಶಬರಿಮಲೈ ಯಾತ್ರಿ ಸಾವು, ಇಬ್ಬರ ಸ್ಥಿತಿ ಗಂಭೀರ

ABOUT THE AUTHOR

...view details