ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ: ಬಹುಮಹಡಿ ಕಟ್ಟಡದಿಂದ ಬಿದ್ದು ಪೇಂಟರ್​ ಸಾವು - ಕಟ್ಟಡದಿಂದ ಬಿದ್ದು ವ್ಯಕ್ತಿ ಸಾವು

ಬಹುಮಹಡಿ ಕಟ್ಟಡವೊಂದರಲ್ಲಿ ಬಣ್ಣ ಬಳಿಯುತ್ತಿದ್ದ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ.

Hubli
ವ್ಯಕ್ತಿ ಸಾವು

By

Published : Oct 4, 2020, 9:38 PM IST

ಹುಬ್ಬಳ್ಳಿ:ಬಹುಮಹಡಿ ಕಟ್ಟಡವೊಂದರ ಐದನೇಯ ಮಹಡಿಯಿಂದ ವ್ಯಕ್ತಿಯೊಬ್ಬ ಬಿದ್ದು ಸಾವಿಗೀಡಾದ ಘಟನೆ ನಗರದ ಮಿಡ್‌ ಮ್ಯಾಕ್ ಲೇಔಟ್ ಬಳಿ ಸಂಭವಿಸಿದೆ.

ಮಂಟೂರ ರಸ್ತೆಯ ನಿವಾಸಿಯಾದ ಪೋತಯ್ಯ ರೊಡ್ಡ(35) ಎಂಬಾತನೇ ಐದನೇಯ ಮಹಡಿಯಿಂದ ಬಿದ್ದು ಪ್ರಾಣವನ್ನ ಕಳೆದುಕೊಂಡಾತ. ನರೇಂದ್ರ ಹೆಸರಿನ ಬಹುಮಹಡಿ ಅಪಾರ್ಟ್​ಮೆಂಟ್​ಗೆ ಬಣ್ಣ ಬಳಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಅತಿಯಾದ ಎತ್ತರದಿಂದ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಈತ ಹಲವು ತಿಂಗಳಿಂದ ನಿರಂತರವಾಗಿ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಘಟನೆ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details