ಕರ್ನಾಟಕ

karnataka

ETV Bharat / city

ಹುಬ್ಬಳ್ಳಿಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಸೂಪರಿಂಡೆಂಟ್ ಇಂಜಿನಿಯರ್ ಸಾವು - ಸೂಪರಿಟೆಂಡೆಂಟ್ ಇಂಜಿನಿಯರ್ ಸಾವು

ರೈಲು ಬದಲಾದ ಹಿನ್ನೆಲೆ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯತಪ್ಪಿ ಬಿದ್ದು ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೂಪರಿಂಡೆಂಟ್​​ ಇಂಜಿನಿಯರ್​ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಜರುಗಿದೆ.

man-death-in-hubli-railway-station
ಪರಿಟೆಂಡೆಂಟ್ ಇಂಜಿನಿಯರ್ ಸಾವು

By

Published : Dec 20, 2021, 10:19 AM IST

ಹುಬ್ಬಳ್ಳಿ : ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಕೆಳಗೆ ಬಿದ್ದು ಸೂಪರಿಂಡೆಂಟ್​​ ಇಂಜಿನಿಯರ್​ ಸಾವಿಗೀಡಾದ ಘಟನೆ ಭಾನುವಾರ ತಡರಾತ್ರಿ ನಗರದ ಸಿದ್ಧಾರೂಢ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ.

ರೈಲು ಇಳಿಯಲು ಹೋಗಿ ಇಂಜಿನಿಯರ್​ ಸಾವು : ಬೆಂಗಳೂರು ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಂಗರಾಜು ಎಸ್​.ಎ ಮೃತರು.

ನಿನ್ನೆ ರಾತ್ರಿ ಹುಬ್ಬಳ್ಳಿ – ಬೆಂಗಳೂರು ರೈಲಿಗೆ ಹತ್ತಬೇಕಿತ್ತು. ಆದರೆ ಬೆಳಗಾವಿ- ಬೆಂಗಳೂರು ರೈಲಿಗೆ ಹತ್ತಿದ್ದರು. ನಂತರ ತಿಳಿದು ಕೂಡಲೇ ಇಳಿಯಲು ಯತ್ನಿಸಿದ್ದಾರೆ. ಆಗ ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details