ಹುಬ್ಬಳ್ಳಿ: ಜೀವ ಅಮೂಲ್ಯವಾಗಿದ್ದು ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ಜೀವ ಉಳಿಸಿಕೊಳ್ಳುವಂತೆ ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ವಾಡಮಠ ಕಿವಿಮಾತು ಹೇಳಿದ್ದಾರೆ.
ರಸ್ತೆ ನಿಯಮ ಪಾಲಿಸಿ ಅಮೂಲ್ಯವಾದ ಜೀವ ಉಳಿಸಿಕೊಳ್ಳಿ: ಅಧಿಕಾರಿಯಿಂದ ಸಲಹೆ - ವಾಹನ ನಿಯಮಗಳು ಅಮೋಲಾಗ್ರ ಬದಲಾವಣೆ
ಜೀವ ಅಮೂಲ್ಯವಾಗಿದ್ದು ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ಜೀವ ಉಳಿಸಿಕೊಳ್ಳುವಂತೆ ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ವಾಡಮಠ ಕಿವಿಮಾತು ಹೇಳಿದ್ದಾರೆ.

ಧಾರವಾಡ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾಡಳಿತ, ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಹು-ಧಾ ಮೋಟಾರು ವಾಹನ ತರಬೇತಿ ಶಾಲೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ನೀಡಬಾರದು. ಇಂದು ಮೋಟಾರು ವಾಹನ ನಿಯಮಗಳು ಅಮೂಲಾಗ್ರ ಬದಲಾವಣೆಯಾಗುತ್ತಿದ್ದು, ಅವುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಇನ್ನೊಬ್ಬರಿಗೆ ತಿಳಿಹೇಳಲು ಹೇಳಿದರು. ಇದಕ್ಕೂ ಮುನ್ನ ರಸ್ತೆ ಸುರಕ್ಷತೆ ಜಾಗೃತಿ ಮೋಟಾರ್ ರ್ಯಾಲಿ ಇಲ್ಲಿನ ಚೆನ್ನಮ್ಮ ವೃತ್ತದಿಂದ ಬಿ.ವಿ.ಬಿ ಎಂಜಿನಿಯರಿಂಗ್ ಕಾಲೇಜ್, ಚೇತನಾ ಕಾಲೇಜ್ ಮುಖಾಂತರ ಮರಳಿ ಚೆನ್ನಮ್ಮ ವೃತ್ತದವರೆಗೆ ಬಂದಿತು.
ನಂತರ ಸಂಚಾರಿ ನಿಯಮ ಪಾಲನೆ ಕುರಿತಂತೆ ನಿಧಾನವೇ ಪ್ರಧಾನ ಎಂಬ ನಾಟಕ ಪ್ರದರ್ಶನ ನಡೆಯಿತು.