ಹುಬ್ಬಳ್ಳಿ:ನಗರದ ಜನನಿಬಿಡ ಪ್ರದೇಶದಲ್ಲಿ ಯುವತಿಯ ಮೇಲೆ ಪಾಗಲ್ ಪ್ರೇಮಿ ಯೊಬ್ಬ ತಲ್ವಾರ್ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಸದ್ಯ ಯುವತಿ ಆರೋಗ್ಯವಾಗಿದ್ದಾಳೆ ಎಂದು ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ತಿಳಿಸಿದ್ದಾರೆ.
ಈ ಯುವಕ, ಯುವತಿ ನಡುವೆ ಹಿಂದಿನಿಂದಲೂ ಪರಿಚಯವಿತ್ತು. ದೇಶಪಾಂಡೆ ನಗರದ ಯುವತಿ ಮನೆಯ ಹತ್ತಿರವೇ ಬೆಳಗ್ಗೆ 10 ಗಂಟೆಗೆ ಹಲ್ಲೆಯಾಗಿದೆ. ಆರೋಪಿ ಇಸ್ಮಾಯಿಲ್ ಯುವತಿ ಮನೆ ಬಳಿ ಕಾಯ್ದು ಕುಳಿತು ಹಲ್ಲೆ ಮಾಡಿದ್ದಾನೆ. ಈಗಾಗಲೇ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಎಂದರು.