ಹುಬ್ಬಳ್ಳಿ:ಪ್ರೇಮಂ ಶರಣಂ ಗಚ್ಛಾಮಿ ಅಂತಾ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿದರು.. ಒಟ್ಟೊಟ್ಟಿಗೆ ಜಾಲಿಯಾಗಿ ಪ್ರೇಮಲೋಕದಲ್ಲಿ ತಿರುಗಾಡಿದರು. ಬಳಿಕ ನನಗೆ ನೀನು, ನಿನಗೆ ನಾನು.. ಒಲವೇ ನಮ್ಮ ಬದುಕು ಎಂದುತಮ್ಮಿಚ್ಛೆಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಈ ಲವ್ ಬರ್ಡ್ಸ್. ಆದ್ರೆ ಈ ನವಜೋಡಿ ಈಗ ಆತಂಕದಲ್ಲಿದ್ದಾರೆ. ಕುಟುಂಬಸ್ಥರ ವಿರೋಧದ ಮಧ್ಯೆ ಮದುವೆಯಾದ ತಮಗೆ ಜೀವ ಬೆದರಿಕೆ ಇದೆ ಎಂದು ಪೊಲೀಸರ ರಕ್ಷಣೆ ಕೋರಿ ಠಾಣೆಯ ಮೆಟ್ಟಿಲೇರಿದ್ದಾರೆ.
ಪ್ರೀತಿಗೆ ಅಡ್ಡ ಬಂತು ಜಾತಿ.. ಹೌದು, ವಾಣಿಜ್ಯ ನಗರಿಯ ನಿವಾಸಿಯಾದ ಮೌನೇಶ ಮತ್ತು ಯುವತಿ ಮನು ಬಳ್ಳಾರಿ ಕಳೆದ 8 ತಿಂಗಳಿಂದ ಪ್ರೀತಿಸುತ್ತಿದ್ದರು. ಅಂತರ್ಜಾತಿ ಎನ್ನುವ ಕಾರಣಕ್ಕೆ ಯುವತಿ ಮನು ಅವರ ಮನೆಯಲ್ಲಿ ಇವರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಪೋಷಕರ ವಿರೋಧವನ್ನೂ ಲೆಕ್ಕಿಸದೇ ಮನು ಜನವರಿ 7 ರಂದು ಧಾರವಾಡದ ಈರಣ್ಣ ದೇವಸ್ಥಾನದಲ್ಲಿ ಮೌನೇಶ್ ಜೊತೆ ಸಪ್ತಪದಿ ತುಳಿದಿದ್ದಾರೆ.