ಧಾರವಾಡ :ಕಬ್ಬಿನ ಹೊಲದಲ್ಲಿ ಬೆಂಕಿ ತಗುಲಿ ಲಾರಿಯೊಂದು ಧಗಧಗನೆ ಹೊತ್ತಿ ಉರಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೋಮನಕೊಪ್ಪ ಗ್ರಾಮದಲ್ಲಿ ನಡೆದಿದೆ.
ದ್ಯಾಮಣ್ಣ ಗುಡಿಗಾಳ ಎಂಬುವರ ಜಮೀನಿನಲ್ಲಿ ಅವಘಡ ಸಂಭವಿಸಿದೆ. ಲಾರಿ ಸ್ಟಾರ್ಟ್ ಮಾಡುವಾಗ ಸ್ಪಾರ್ಕ್ ಹೊರಹೊಮ್ಮಿ ಕೆಳಗೆ ಬಿದ್ದಿದೆ. ತಕ್ಷಣವೇ ಬೆಂಕಿಯ ಕಿಡಿ ಕಬ್ಬಿನ ಸ್ವಾಗಿಗೆ( ಒಣಗಿದ ಸಿಪ್ಪೆ) ತಗುಲಿ ಬೆಂಕಿ ಲಾರಿಗೂ ತಗುಲಿದೆ. ಬೆಂಕಿಯು ಕ್ಷಣ ಮಾತ್ರದಲ್ಲಿ ಸಂಪೂರ್ಣ ಲಾರಿಗೆ ವ್ಯಾಪಿಸಿದ್ದು, ಲಾರಿ ಸುಟ್ಟು ಕರಕಲಾಗಿದೆ.
ಹೊಲದಲ್ಲಿ ಧಗಧಗನೆ ಹೊತ್ತಿ ಉರಿದ ಕಬ್ಬು ತುಂಬಿದ ಲಾರಿ ಇದನ್ನೂ ಓದಿ: ಬಾಸುಂಡೆ ಬರುವ ರೀತಿ ಹೊಡೆದು ಕ್ಷಮೆ ಕೇಳಿದ ಶಿಕ್ಷಕಿ!
ಈ ಬೆಂಕಿ ಪಕ್ಕದ ಮೂರು ಎಕರೆ ಕಬ್ಬಿನ ಗದ್ದೆಗೂ ತಾಗಿ ಕಬ್ಬು ಭಸ್ಮವಾಗಿದೆ. ಈ ಜಮೀನು ಗಂಗವ್ವ ಕೂಲಿ ಎಂಬುವರಿಗೆ ಸೇರಿದ್ದಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ