ಹುಬ್ಬಳ್ಳಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಬಾಹಿರ ಹಾಗೂ ಕಾನೂನು ಸುವ್ಯವಸ್ಥೆ ಹಾಳು ಮಾಡುವ ರೌಡಿಗಳಿಗೆ ಪೊಲೀಸ್ ಆಯುಕ್ತರು ಕ್ಲಾಸ್ ತೆಗೆದುಕೊಂಡರು.
ಪರೇಡ್ ನಡೆಸಿ ಹುಬ್ಬಳ್ಳಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸ್ ಆಯುಕ್ತರು - ಹುಬ್ಬಳ್ಳಿ ರೌಡಿ
ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಕಾರವಾರ ರಸ್ತೆ ಸಿಎಆರ್ ಮೈದಾನದಲ್ಲಿ 200ಕ್ಕೂ ಹೆಚ್ಚು ರೌಡಿಗಳ ವಿಚಾರಣೆ ನಡೆಸಿ ಚುನಾವಣೆ ಸಂದರ್ಭದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರು.
ಪರೇಡ್
ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಕಾರವಾರ ರಸ್ತೆ ಸಿಎಆರ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದರು. 200ಕ್ಕೂ ಹೆಚ್ಚು ರೌಡಿಗಳ ವಿಚಾರಣೆ ನಡೆಸಿದ ಅವರು, ಚುನಾವಣೆ ಸಂದರ್ಭದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರು. ಯಾವುದಾದ್ರೂ ಪಕ್ಷ ಹಾಗೂ ವ್ಯಕ್ತಿಯ ಪರವಾಗಿ ಕಾನೂನು ಉಲ್ಲಂಘಿಸಿ ಕೆಲಸ ಮಾಡಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ವಾರ್ನ್ ಮಾಡಿದರು.
ಯಾರಾದ್ರೂ ಎಚ್ಚರಿಕೆ ಮೀರಿ ವರ್ತಿಸಿದರೆ ಗಡಿಪಾರಿಗೆ ಆದೇಶ ನೀಡುವುದಾಗಿಯೂ ಖಡಕ್ ಎಚ್ಚರಿಕೆ ನೀಡಿದರು.