ಕರ್ನಾಟಕ

karnataka

By

Published : Jun 4, 2021, 5:45 PM IST

Updated : Jun 4, 2021, 7:08 PM IST

ETV Bharat / city

ಕೋವಿಡ್ ‌ಪಾಸಿಟಿವ್ ರೇಟ್ ಶೇ.5ಕ್ಕೆ ಇಳಿದರೆ ರಾಜ್ಯ ಅನ್​​​​ಲಾಕ್‌: ಸಿಎಂ BSY

ಕೋವಿಡ್ ಪಾಸಿಟಿವಿಟಿ ದರ ಶೇ.05 ಕ್ಕೆ ಬಂದರೆ ಅನ್​ಲಾಕ್ ತೆರುವುಗೊಳಿಸಲಾಗುವುದು ಎಂದು ಇಂದು ಸಿಎಂ ಬಿಎಸ್​ವೈ ಹುಬ್ಬಳ್ಳಿಯಲ್ಲಿ ತಿಳಿಸಿದ್ದಾರೆ.

cm
cm


ಹುಬ್ಬಳ್ಳಿ: ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.17.09 ರಷ್ಟಿದ್ದು, ಅದು ಶೇ.05 ಕ್ಕೆ ಬಂದರೆ ಅನ್​ಲಾಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಧಾರವಾಡ ಜಿಲ್ಲೆಯ ಕೋವಿಡ್ ನಿಯಂತ್ರಣ ಹಾಗೂ ಇತರ ಅಭಿವೃದ್ಧಿ ವಿಷಯಗಳ ಪರಿಶೀಲನೆ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕೋವಿಡ್ ‌ಪಾಸಿಟಿವ್ ರೇಟ್ ಶೇ.5ಕ್ಕೆ ಇಳಿದರೆ ರಾಜ್ಯ ಅನ್​​​​ಲಾಕ್‌: ಸಿಎಂ BSY
ಧಾರವಾಡ ಜಿಲ್ಲಾಡಳಿತ ಕೋವಿಡ್ ನಿಯಂತ್ರಣದಲ್ಲಿ ಉತ್ತಮ ಕೆಲಸ ಮಾಡುತ್ತಿದೆ, ಪ್ರತಿ ತಾಲೂಕಿಗೆ ಮೂರು ಆ್ಯಂಬುಲೆನ್ಸ್​​ ನೀಡಿದ್ದಾರೆ. ಹಳ್ಳಿಗಳಲ್ಲಿ ಕೋವಿಡ್ ಕೇರ್ ತೆರೆದು ಚಿಕಿತ್ಸೆ ಕೊಡಲಾಗುತ್ತಿದೆ. ಪ್ರತಿಯೊಬ್ಬ ಅಧಿಕಾರಿಗಳು ಅಷ್ಟೇ ಅಲ್ಲದೇ ನಾಗರಿಕರು ಕೂಡಾ ಕೊರೊನಾ ನಿಯಂತ್ರಣದಲ್ಲಿ ಕೈಜೋಡಿಸಬೇಕು ಎಂದರು.ಇನ್ನು ದೆಹಲಿಯಿಂದ ಈಗಾಗಲೇ ರಾಜ್ಯಕ್ಕೆ ಬ್ಲ್ಯಾಕ್ ಫಂಗಸ್​ಗೆ 9 ಸಾವಿರ ಅಂಪೋಟೆರಿಸನ್ ಬಿ ಔಷಧ ಬಂದಿದ್ದು, ಅದನ್ನು ಎಲ್ಲರಿಗೂ ಕೊಡುವ ವ್ಯವಸ್ಥೆ ಮಾಡಲಾಗುವುದು. ಮೂರನೇ ಅಲೆ ಬಂದರೆ ಅದಕ್ಕೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಬಗ್ಗೆ ಕೂಡಾ ಚರ್ಚೆ ಮಾಡಲಾಗಿದೆ ಎಂದರು.

ಮೈಸೂರಿನಲ್ಲಿ ಅಧಿಕಾರಿಗಳ‌ ಮಧ್ಯೆ ಗೊಂದಲ‌ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗೊಂದಲ ಇರುವುದು ನಿಜ. ಇಂದು ಸಂಜೆ ಬೆಂಗಳೂರಿಗೆ ಹೋಗಿ ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ತಿಳಿಸಿದರು.

Last Updated : Jun 4, 2021, 7:08 PM IST

ABOUT THE AUTHOR

...view details