ಹುಬ್ಬಳ್ಳಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಕಿಮ್ಸ್ ಆಸ್ಪತ್ರೆ ಆವರಣದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಹೀಗಾಗಿ ರೋಗಿಗಳನ್ನು ನೋಡಿಕೊಳ್ಳಲು ಆಗಮಿಸಿದ ಸಂಬಂಧಿಗಳಿಗೆ ಹನಿ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ.
'ನೀವು ಬಂದಿದ್ದೇ ನಮ್ಮ ಪುಣ್ಯ, ಇಲ್ಲಂದ್ರೆ ನೀರು ಕುಡಿದು ಮಲಗಬೇಕಿತ್ರೀ'... ಕಿಮ್ಸ್ ಆಸ್ಪತ್ರೆಯಲ್ಲಿರುವವರ ಅಳಲು - ಊಟಕ್ಕಾಗಿ ಪರದಾಟ
ಲಾಕ್ಡೌನ್ ನಿಂದಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿರುವ ರೋಗಿಗಳ ಸಂಬಂಧಿಗಳು ಆಹಾರ ಸಿಗದೇ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವು ದಾನಿಗಳು ಬಂದು ಊಟ, ಉಪಹಾರ ಹಾಗೂ ನೀರು ವಿತರಿಸಿ ಹೋಗುತ್ತಿದ್ದರು. ಆದರೆ ಈಗ ಪೊಲೀಸರು ಆಹಾರ ವಿತರಿಸಲು ಆಗಮಿಸುವರನ್ನು ಕಿಮ್ಸ್ ಒಳಗೆ ಬಿಡುತ್ತಿಲ್ಲ. ಆಹಾರ ವಿತರಿಸುವವರಿಗೆ ಕಡಿವಾಣ ಹಾಕಿದೆ. ಹೀಗಾಗಿ ರೋಗಿಗಳ ಸಂಬಂಧಿಗಳು ಆಹಾರ ಸಿಗದೆ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆಯೂ ದಾನಿಗಳು ಬಂದು ಊಟ ನೀಡಿದ್ದು, ಇದರಿಂದಾಗಿ ಅಲ್ಲಿದ್ದವರು ನೀವು ಬಂದಿದ್ದು ನಮ್ಮ ಪುಣ್ಯ, ಇಲ್ಲಾ ಅಂದಿದ್ರೆ ನೀರು ಕುಡಿದು ಮಲಗಬೇಕಿತ್ರೀ ಎಂದು ತಮ್ಮ ಅಳಲನ್ನು ಹೊರ ಹಾಕಿದ್ದಾರೆ.
ಹೀಗಾಗಿ ಜಿಲ್ಲಾಡಳಿತ ಹಾಗೂ ಕಿಮ್ಸ್ ಆಡಳಿತ ಮಂಡಳಿ ರೋಗಿಗಳ ಸಂಬಂಧಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.