ಹುಬ್ಬಳ್ಳಿ:ಇಲ್ಲಿನ ವರೂರಿನ ಕಾಮತ್ ಉಪಹಾರ ಹೋಟೆಲ್ವೊಂದರಲ್ಲಿ ಪೂರೈಸಿದ್ದ ಪೂರಿ-ಬಾಜಿಯಲ್ಲಿ ಬೆಂದ ಹಲ್ಲಿ ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗ್ರಾಹಕರಿಕೆ ಸೇರಿ ಒಟ್ಟು 90 ಸಾವಿರ ರೂ. ಪರಿಹಾರ ನೀಡಲು ಹೋಟೆಲ್ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. 2018 ರಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರು ಕುರಿತು ಆಯೋಗ ಈ ಆದೇಶ ಹೊರಡಿಸಿದೆ.
2018 ರ ಸೆ.26 ರ ಬೆಳಗ್ಗೆ ಹುಬ್ಬಳ್ಳಿಯ ವರೂರಿನ ಕಾಮತ್ ಉಪಪಾರ ಹೋಟೆಲ್ನಲ್ಲಿ ಗ್ರಾಹಕರಾದ ವಿನಾಯಕ ಮತ್ತು ಸಹನಾ ಅವರಿಗೆ ಪೂರೈಸಿದ್ದ ಪೂರಿ-ಬಾಜಿಯಲ್ಲಿ ಬೆಂದ ಹಲ್ಲಿ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಇಬ್ಬರೂ ಗ್ರಾಹಕರು ಹೋಟೆಲ್ ಸಿಬ್ಬಂದಿಯ ಗಮನಕ್ಕೆ ತಂದರು. ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವಿಷಪೂರಿತ ಉಪಹಾರ ಸೇವಿಸಿದ್ದ ಗ್ರಾಹಕ ವಿನಾಯಕ ಅವರಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡ ಕಾರಣ ಶಿಗ್ಗಾಂವ ಹಾಗೂ ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು.