ಹುಬ್ಬಳ್ಳಿ: ಮಾನವನ ಅಂಗಾಂಗ ಕಸಿ ಮಾಡುವ ಉದ್ದೇಶದಿಂದ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಲಿವರ್‌ನ ಕೇವಲ ಹತ್ತು ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪುವಂತೆ ಮಾಡುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೀರೋ ಟ್ರಾಫಿಕ್ ಮೂಲಕ 10 ನಿಮಿಷದಲ್ಲಿ ಲಿವರ್ ಸಾಗಣೆ - Liver transport with in 10 minutes by Zero traffic
ಈ ಕಾರ್ಯಕ್ಕೆ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಅಗತ್ಯ ಪೊಲೀಸ್ ಬೆಂಗಾವಲು ಸೇವೆಯನ್ನು ಒದಗಿಸಲಾಗಿತ್ತು. ಗ್ರೀನ್ ಕಾರಿಡಾರ್ (ಜೀರೋ ಟ್ರಾಫಿಕ್)ಗೆ ಸಹಕರಿಸಿದ ನಾಗರಿಕರಿಗೆ ಹಾಗೂ ಅಂಗಾಂಗ ಕಸಿ ದಾನ ಮಾಡಿದ ಕುಟುಂಬದವರಿಗೆ ಪೊಲೀಸ್ ಇಲಾಖೆ ಧನ್ಯವಾದ ತಿಳಿಸಿದೆ.
ಧಾರವಾಡದ ಎಸ್‌ಡಿಎಂ ಆಸ್ಪತ್ರೆಯವರು ಒಂದು ಗಂಟೆ ಮೊದಲೇ ನೀಡಿದ ಮನವಿ ಮೇರೆಗೆ ಹಾಗೂ ಅಂಗಾಂಗ ಕಸಿ ಪ್ರಾಧಿಕಾರದ ನಿಯಮದಂತೆ ಎಸ್‌ಡಿಎಂ ಆಸ್ಪತ್ರೆಯಿಂದ ವ್ಯಕ್ತಿಯೊಬ್ಬರ ಲಿವರ್ ಅನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದವರೆಗೆ ಸಾಗಿಸಲಾಯಿತು. ಸುಮಾರು 16 ಕಿ.ಮೀವರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಲಿವರ್ ತಲುಪಿಸಲಾಗಿದೆ.
ಇನ್ನು, ಈ ಕಾರ್ಯಕ್ಕೆ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರೇಟ್ನಿಂದ ಅಗತ್ಯ ಪೊಲೀಸ್ ಬೆಂಗಾವಲು ಸೇವೆ ಒದಗಿಸಲಾಗಿತ್ತು. ಗ್ರೀನ್ ಕಾರಿಡಾರ್ (ಜೀರೋ ಟ್ರಾಫಿಕ್)ಗೆ ಸಹಕರಿಸಿದ ನಾಗರಿಕರಿಗೆ ಹಾಗೂ ಅಂಗಾಂಗ ಕಸಿ ದಾನ ಮಾಡಿದ ಕುಟುಂಬದವರಿಗೆ ಪೊಲೀಸ್ ಇಲಾಖೆ ಧನ್ಯವಾದ ತಿಳಿಸಿದೆ.