ಹುಬ್ಬಳ್ಳಿ/ಧಾರವಾಡ: ಲಾಕ್ಡೌನ್ ಆದೇಶ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಹಲವು ಕಡೆ ಅಬಕಾರಿ ಇಲಾಖೆ ದಾಳಿ ನೆಡೆಸಿದೆ. ನಾಲ್ಕು ಪಟ್ಟು ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ, ಸುಮಾರು 40 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿಯಲ್ಲಿ ಲಾಕ್ಡೌನ್ ನಡುವೆಯೂ ಮಾರಾಟ: 40 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ವಶ
ಲಾಕ್ಡೌನ್ ಜಾರಿಯಾಗಿರುವುದರಿಂದ ಮದ್ಯದಂಗಡಿ ತೆರೆಯದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಮಧ್ಯೆ ಹೆಚ್ಚಿನ ಲಾಭ ಮಾಡುವ ಉದ್ದೇಶದಿಂದ ಹುಬ್ಬಳ್ಳಿಯ ಕೆಲ ಮಾಲೀಕರು ಅಂಗಡಿ ತೆರದು ನಾಲ್ಕು ಪಟ್ಟು ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಲಾಕ್ಡೌನ್ ನಡುವೆಯೇ ಮದ್ಯ ಮಾರಾಟ: ಅಬಕಾರಿ ಇಲಾಖೆ ದಿಢೀರ್ ದಾಳಿ
ಅಬಕಾರಿ ಇನ್ಸ್ಪೆಕ್ಟರ್ ಸಂಜೀವ ರೆಡ್ಡಿ ನೇತೃತ್ವದಲ್ಲಿ ತೇಜ್ ವೈನ್ಸ್ ಸೇರಿದಂತೆ ವಿವಿಧ ಮದ್ಯದಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಲಾಕ್ಡೌನ್ ಇದ್ದರೂ ಅಂಗಡಿ ತೆರೆದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂಗಡಿ ವಿರುದ್ಧ ಹಾಗೂ ಮಾಲೀಕರಿಗೆ ಅಬಕಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಅಲ್ಲದೇ ತೇಜ್ ವೈನ್ಸ್ ಅಂಗಡಿ ಲೈಸನ್ಸ್ ರದ್ದು ಮಾಡಿದ್ದಾರೆ.