ಧಾರವಾಡ: ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಮೂರುಸಾವಿರ ಮಠ ವಿವಾದ, ಕುಳಿತು ಬಗೆಹರಿಸಿಕೊಳ್ಳಲಿ: ಹೊರಟ್ಟಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಓರ್ವ ಸ್ವಾಮೀಜಿ ರಾಜಕಾರಣಿಗಳಂತೆ ಮೆರವಣಿಗೆ ನಡೆಸುವುದು ಸರಿಯಲ್ಲ. ಇದು ಗೂಂಡಾಗಿರಿ ತರಹ ಎನ್ನುವ ಭಾವನೆ ಜನರಲ್ಲಿ ಬರಬಾರದು. ಮಠದಲ್ಲಿ ಕುಳಿತುಕೊಂಡು ಅವರವರೇ ಬಗೆ ಹರಿಸಿಕೊಳ್ಳಬೇಕು ಎಂದರು.
ದಿಂಗಾಲೇಶ್ವರರನ್ನು ನಾನು ಈ ಮಠಕ್ಕೆ ಉತ್ತರಾಧಿಕಾರಿ ಮಾಡೋದಿಲ್ಲ ಅಂತಾ ಮಠದ ಶ್ರೀಗಳು ನಮ್ಮ ಮುಂದೆ ಹೇಳಿದ್ದಾರೆ. ಹೀಗಿರುವಾಗ ಯಾಕೆ 45 ದಿನಗಳ ಗಡುವು ಕೊಡಬೇಕು? ಪ್ರೀತಿ-ವಿಶ್ವಾಸದಿಂದ ಮಾಡುವುದಾದರೆ ಮಾಡಲಿ. ಇಲ್ಲವೇ ಇವರ ಮಠ ಇವರು ನೋಡಿಕೊಳ್ಳಲಿ, ಅವರ ಮಠ ಅವರು ನೋಡಿಕೊಳ್ಳಲಿ ಎಂದು ಹೊರಟ್ಟಿ ಹೇಳಿದ್ರು.
ವಿಜಯಪುರ ಬಿಜೆಪಿ ಶಾಸಕ ಯತ್ನಾಳ್ ರಾಜಕೀಯ ನಾಯಕರ ಬಗ್ಗೆ ಮಾತನಾಡುವ ಶೈಲಿ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಹೊರಟ್ಟಿ, ಅವರ ಮಾತು ಒರಟು ಆದ್ರ ಹೃದಯ ಚೊಲ ಅದ . ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಸಹಜ. ಭಾಷೆ ಉಪಯೋಗಿಸುವಾಗ ವಿಚಾರ ಮಾಡ್ಬೇಕು ಎಂದರು.