ಹುಬ್ಬಳ್ಳಿ: ಲ್ಯಾಪ್‌ಟಾಪ್ ರಿಪೇರಿ ನೆಪ ಹೇಳಿ ಹೆಚ್ಚಿನ ಹಣ ಕೇಳಿದ್ದ ಲೆನೊವೊ ಕಂಪನಿ ವಿರುದ್ಧ ಗ್ರಾಹಕರೊಬ್ಬರು ಜಿಲ್ಲಾ ಗ್ರಾಹಕ ಕೋರ್ಟ್ಗೆ ದೂರು ನೀಡಿದ ಹಿನ್ನೆಲೆ 8 ಸಾವಿರ ರೂ. ಪರಿಹಾರ ಮತ್ತು ಕನಿಷ್ಠ ಸೇವಾ ಶುಲ್ಕ ಪಡೆದು 30 ದಿನಗಳಲ್ಲಿ ಸಮಸ್ಯೆ ಬಗೆಹರಿಸಿಕೊಡುವಂತೆ ಕೋರ್ಟ್ ಆದೇಶ ನೀಡಿದೆ.
ವಿಕ್ರಮ ಕುಮಠಾ ಎಂಬುವವರು 2017ರಲ್ಲಿ ಲೆನೊವೊ ವೈ-520 ಲ್ಯಾಪ್ಟಾಪ್ಅನ್ನು ಸುಮಾರು 97,000 ರೂ.ಗೆ ಖರೀದಿಸಿದ್ದರು. 2019ರ ನವಂಬರ್ ತಿಂಗಳಲ್ಲಿ ಲ್ಯಾಪ್‌ಟಾಪ್ ಕೆಲಸ ಮಾಡುವಾಗ ಕೈ ಕೊಟ್ಟಿದೆ. 2 ವರ್ಷದ ವಾರಂಟಿ ಅವಧಿ ಮುಗಿದ ಕಾರಣ ಆನ್‌ಲೈನ್ ಕಂಪ್ಲೇಂಟ್ ಮೂಲಕ ಕಸ್ಟಮರ್ ಕೆರ್ ನಂಬರ್ ಪಡೆದು, ತಮ್ಮ ಲ್ಯಾಪ್‌ಟಾಪ್ ತೊಂದರೆ ತಿಳಿಸಿದ್ದಾರೆ. ಬಳಿಕ, ಹುಬ್ಬಳ್ಳಿಯ ಕೆಂಗೇರಿ ರಸ್ತೆಯಲ್ಲಿದ್ದ ಲೆನೊವೊ ಸರ್ವಿಸ್ ಸೆಂಟರ್‌ಗೆ ರಿಪೇರಿ ಮಾಡಲು ಕೊಟ್ಟಿದ್ದರು.