ಧಾರವಾಡ:ಮಾನವೀಯತೆಯೇ ಶ್ರೇಷ್ಠವಾದ ನ್ಯಾಯ ಮತ್ತು ಕಾನೂನು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ರಾಜ್ಯ ಕಾನೂನು ವಿವಿ 5ನೇ ಘಟಿಕೋತ್ಸವ ಭಾಷಣದಲ್ಲಿ ಮಾತನಾಡಿದ ಅವರು, ಮನುಷ್ಯತ್ವಕ್ಕಿಂತ ದೊಡ್ಡ ಕಾನೂನು ಯಾವುದೂ ಇಲ್ಲ. ಮಾನವೀಯತೆ ಅತ್ಯಂತ ಶ್ರೇಷ್ಠ ನ್ಯಾಯ-ಕಾನೂನು. ನ್ಯಾಯ ಮತ್ತು ಸಮಾನತೆ ಉಳಿಸಲು ನಮ್ಮ ಹೋರಾಟ ನಡೆಯಬೇಕು ಎಂದರು.
ಜೀವನದಲ್ಲಿ ಹಣವೇ ಬಹಳ ಶ್ರೇಷ್ಠ ಅಂತಾ ನಾವು ಭಾವಿಸಬಾರದು. ನಾವೆಲ್ಲ ಚೆನ್ನಾಗಿರೋ ಮನೆಯಿಂದಲೇ ಬಂದವರೇ ಆದರೂ, ರಾಜಕಾರಣ ಮಾಡಿ ಹೀಗೆ ಬೆಳೆದಿದ್ದೇವೆ. ಹೀಗೆ ಬೆಳೆಯಬೇಕಾದರೆ ಹೋರಾಟವನ್ನೇ ಮಾಡಿದ್ದೇವೆ. ನಾವು ಬೇರೆಯವರಿಗಿಂತ ಭಿನ್ನವಾಗಿ ಕಾಣಬೇಕು. ಅದಕ್ಕಾಗಿ ಹೋರಾಟದ ಮೂಲಕ ಬೆಳೆಯಬೇಕು. ಗುರುತಿಸಿಕೊಳ್ಳುವುದು ಸುಲಭ, ಆದರೆ ಗೌರವಿಸಿಕೊಳ್ಳುವುದು ಬಹಳ ಕಷ್ಟ. ಗೌರವಿಸಿಕೊಳ್ಳಬೇಕಾದರೆ ಅನೇಕ ತ್ಯಾಗ ಮಾಡಬೇಕಾಗುತ್ತದೆ. ಸಾಧನೆಗಳನ್ನು ಮಾಡಬೇಕಾಗುತ್ತದೆ ಎಂದರು.