ಕರ್ನಾಟಕ

karnataka

ETV Bharat / city

ಸಿದ್ಧಾರೂಢರ ಮಹಾ ರಥೋತ್ಸವಕ್ಕೆ ಹರಿದು ಬಂತು ಭಕ್ತ ಸಾಗರ.. - ಸಿದ್ಧಾರೂಢ ಜಾತ್ರೆ

ಸಿದ್ಧಾರೂಢರ ಮಹಾ ರಥೋತ್ಸವವು ಬುಧವಾರ ಸಂಜೆ ಬಹಳ ಅದ್ಧೂರಿಯಾಗಿ ನೆರವೇರಿತು..

Hubli Siddarooda fair
ಸಿದ್ಧಾರೂಢರ ಮಹಾ ರಥೋತ್ಸವ

By

Published : Mar 3, 2022, 7:23 AM IST

ಹುಬ್ಬಳ್ಳಿ(ಧಾರವಾಡ):ಉತ್ತರ ಕರ್ನಾಟಕ ಭಾಗದ ಭಕ್ತರ ಆರಾಧ್ಯ ದೈವ ಶ್ರೀ ಸಿದ್ಧಾರೂಢರ ಮಹಾ ರಥೋತ್ಸವವು ಬುಧವಾರ ಸಂಜೆ ನೆರವೇರಿತು. ರಥೋತ್ಸವ ಕಣ್ತುಂಬಿಕೊಳ್ಳಲು ಭಕ್ತಸಾಗರ ಹರಿದುಬಂದಿತ್ತು.

ಸಿದ್ಧಾರೂಢರ ಮಹಾ ರಥೋತ್ಸವ

ಕೊರೊನಾ ಕಾರಣದಿಂದ ಎರಡು ವರ್ಷಗಳಿಂದ ಸರಳವಾಗಿ ಆಚರಣೆ ಮಾಡಿದ್ದ ಜಾತ್ರಾ ಮಹೋತ್ಸವನ್ನು ನಿನ್ನೆ ಅದ್ಧೂರಿಯಾಗಿ ಆಚರಿಸಲಾಗಿದ್ದು, ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಈ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತರು ರಥಕ್ಕೆ ಉತತ್ತಿ, ಬಾಳೆ ಎಸೆದು ವರ ಬೇಡಿಕೊಂಡರು.

ಇದನ್ನೂ ಓದಿ:ಗಯಾನಾದಲ್ಲಿ ಉನ್ನತ ಶಿಕ್ಷಣವನ್ನು ಸುಧಾರಿಸಲು ಸಹಕಾರ ನೀಡಿ: ಪೂರ್ವ ಆಫ್ರಿಕಾ ದೇಶದ ನಿಯೋಗದಿಂದ ಸರ್ಕಾರಕ್ಕೆ ಮನವಿ

ಮಹಾರಥೋತ್ಸವದಲ್ಲಿ ಧಾರವಾಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಸೇರಿ ರಾಜ್ಯದ ವಿವಿಧೆಡೆಯ ಭಕ್ತರು ಆಗಮಿಸಿದ್ದರು. ರಾಜ್ಯ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಿಂದಲೂ ಭಕ್ತರು ಆಗಮಿಸಿದ್ದರು.

ABOUT THE AUTHOR

...view details