ಧಾರವಾಡ: ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ಪರದಾಡಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ನಡೆಯಿತು. ಇಂದು ಬೆಳಿಗ್ಗೆ ಗ್ರಾಮದ ಯಲ್ಲಮ್ಮ ಮಂಟೂರು(85) ಎಂಬುವರು ನಿಧನವಾಗಿದ್ದು ಮೃತದೇಹದ ಅಂತ್ಯಕ್ರಿಯೆಗೆ ಕೆಲವರು ಅಡ್ಡಿಪಡಿಸಿದ್ದಾರೆ.
ಅದೇ ಗ್ರಾಮದ ಕಲ್ಲಯ್ಯಾ ಮತ್ತು ಕಲ್ಲಪ್ಪ ತಳವಾರ ಎಂಬುವವರು ಮೃತದೇಹದ ಅಂತ್ಯಕ್ರಿಯೆಗೆ ಅಡ್ಡಿ ಪಡಿಸಿದ್ದರು. ಈ ಇಬ್ಬರು ನಮ್ಮ ಜಮೀನಿನಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತಹಶೀಲ್ದಾರ್ ಎಂ.ಜಿ.ಹೊರ್ಕಿನಿ ಜಮೀನು ಮಾಲೀಕರ ಮನವೊಲಿಸಲು ಪ್ರಯತ್ನಿಸಿದರೂ ಒಪ್ಪಿಗೆ ನೀಡಿಲ್ಲ.