ಕರ್ನಾಟಕ

karnataka

ETV Bharat / city

ಕೊರೊನಾ ಜಯಿಸಿದ ಮಹಿಳಾ ಹೆಡ್ ಕಾನ್ಸ್‌ಟೇಬಲ್​, ಮತ್ತೆ ಕರ್ತವ್ಯಕ್ಕೆ ಹಾಜರ್​! - ಮಹಿಳಾ ಹೆಡ್ ಕಾನ್ಸ್‌ಟೇಬಲ್​ ಮತ್ತೆ ಕರ್ತವ್ಯಕ್ಕೆ ಹಾಜ

ಧಾರವಾಡ ಶಹರ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಕೊರೊನಾ ವಿರುದ್ಧ ಹೋರಾಡಿ ಇದೀಗ ಕರ್ತವ್ಯಕ್ಕೆ ಮರಳಿದ್ದಾರೆ. ಅವರಿಗೆ ಎಸಿಪಿ ಅನುಷಾ ಹೂಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ.

Lady police constable
ಕೊರೊನಾ ಜಯಿಸಿದ ಮಹಿಳಾ ಹೆಡ್ ಕಾನ್ಸ್‌ಟೇಬಲ್

By

Published : Jul 26, 2020, 1:17 PM IST

ಧಾರವಾಡ:ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಕೊರೊನಾ ಕಂಟಕವಾಗುತ್ತಿದೆ. ಇದರ ಜೊತೆಗೆ ಶೀಘ್ರದಲ್ಲೇ ಪೊಲೀಸರು ಕೊರೊನಾ ಗೆದ್ದು ಸೇವೆಗೆ ಹಾಜರಾಗುತ್ತಿದ್ದಾರೆ.

ಧಾರವಾಡ ಶಹರ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಕೊರೊನಾ ವಿರುದ್ಧ ಹೋರಾಡಿ ಇದೀಗ ಕರ್ತವ್ಯಕ್ಕೆ ಮರಳಿದ್ದಾರೆ. ಅವರಿಗೆ ಎಸಿಪಿ ಅನುಷಾ ಹೂಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಈ ಮಹಿಳಾ ಹೆಡ್ ಕಾನ್ಸ್‌ಟೇಬಲ್​ಗೆ ಕಳೆದ ಜುಲೈ ಎರಡರಂದು ಕೋವಿಡ್​ ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಹೋಂ ಕ್ವಾರೈಂಟೈನ್ ಮುಗಿಸಿ ಇದೀಗ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕೊರೊನಾ ಜಯಿಸಿದ ಮಹಿಳಾ ಹೆಡ್ ಕಾನ್ಸ್‌ಟೇಬಲ್

ಈ ಬಗ್ಗೆ ಎಸಿಪಿ‌ ಅನುಷಾ ಮಾತನಾಡಿ, ಪೊಲೀಸರು ಜನರೊಂದಿಗೆ ಒಡನಾಟ ಹೊಂದಿರುತ್ತೀರಿ. ಹೀಗಾಗಿ ಯಾವಾಗಲೂ ಕೈ ತೊಳೆಯುತ್ತಿರಿ. ಸಾಮಾಜಿಕ ಅಂತರ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಿ. ಕೊರೊನಾಗೆ ಹೆದರುವ ಅವಶ್ಯಕತೆಯಿಲ್ಲ ಎಂದು ಪೊಲೀಸರಿಗೆ ಧೈರ್ಯ ತುಂಬಿದರು.

For All Latest Updates

ABOUT THE AUTHOR

...view details