ಹುಬ್ಬಳ್ಳಿ: ಕಟ್ಟಡ ನಿರ್ಮಾಣ ವೇಳೆ ಕಾರ್ಮಿಕನೊಬ್ಬನ ಕೈಗೆ ಕಬ್ಬಿಣದ ರಾಡ್ ಬಲವಾಗಿ ಚುಚ್ಚಿದ ಪರಿಣಾಮ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ನಡೆದಿದೆ.
ಕಟ್ಟಡ ನಿರ್ಮಾಣದ ವೇಳೆ ಆಯತಪ್ಪಿ ರಾಡ್ ಮೇಲೆ ಬಿದ್ದ ಕಾರ್ಮಿಕ: ಗಂಭೀರ ಗಾಯ - hubli latest news
ಹುಬ್ಬಳ್ಳಿಯ ಮಂಟೂರ ರಸ್ತೆ ಬಳಿ ಕಟ್ಟಡ ನಿರ್ಮಾಣದ ವೇಳೆ ಕಾರ್ಮಿಕನೊಬ್ಬ ಆಯತಪ್ಪಿ ರಾಡ್ ಮೇಲೆ ಬಿದ್ದಿದ್ದು, ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗಂಭೀರವಾಗಿ ಗಾಯಗೊಂಡ ಕಾರ್ಮಿಕ
ಹಸನಸಾಬ್ ಗಂಭೀರವಾಗಿ ಗಾಯಗೊಂಡ ಕಾರ್ಮಿಕ. ಈತ ಕಟ್ಟಡ ನಿರ್ಮಾಣದ ವೇಳೆ ಆಯತಪ್ಪಿ ರಾಡ್ ಮೇಲೆ ಬಿದ್ದಿದ್ದಾನೆ. ಈ ವೇಳೆ ಹಸನಸಾಬ ಬಲಗೈಗೆ ಕಬ್ಬಿಣದ ರಾಡ್ ಚುಚ್ಚಿದ್ದು, ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.