ಕರ್ನಾಟಕ

karnataka

ETV Bharat / city

ಪತಿಯ ಸಮಾಧಿ ಮುಂದೆ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಶಿವಳ್ಳಿ ಕಣ್ಣೀರು - undefined

ಇಂದು ಕುಂದಗೋಳ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿವಂಗತ ಸಿ ಎಸ್ ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಸಂಜೆ ಪತಿ ಸಮಾಧಿ ಬಳಿ ತೆರಳಿ ಕಣ್ಣೀರು ಹಾಕಿದರು.

ಪತಿ ಸಮಾಧಿ ಮುಂದೆ ಕಣ್ಣೀರು ಹಾಕಿದ ಕುಸುಮಾ ಶಿವಳ್ಳಿ

By

Published : Apr 29, 2019, 9:36 PM IST

ಹುಬ್ಬಳ್ಳಿ: ದಿವಂಗತ ಸಿ ಎಸ್ ಶಿವಳ್ಳಿಯವರ ಸಮಾಧಿಯ ದರ್ಶನ ಪಡೆದ ಶಿವಳ್ಳಿಯವರ ಪತ್ನಿ, ಕುಂದಗೋಳ ಕಾಂಗ್ರೆಸ್​​ ಅಭ್ಯರ್ಥಿ ಕುಸುಮಾ ಶಿವಳ್ಳಿ ಕಣ್ಣೀರು ಹಾಕಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಸುಮಾ ಇಂದು ನಾಮಪತ್ರ ಸಲ್ಲಿಸಿ‌ದರು. ಬೆಳಗ್ಗೆಯಿಂದ ರೋಡ್‌ಶೋ, ನಾಮಪತ್ರ ಸಲ್ಲಿಕೆಯಲ್ಲಿ ಅವರು ಬ್ಯುಸಿಯಾಗಿದ್ದರು. ಹೀಗಾಗಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿರುವ ಸಿ. ಎಸ್. ಶಿವಳ್ಳಿಯವರ ಸಮಾಧಿಗೆ ಸಂಜೆ ಮಗ ಅಮರಶಿವ ಸೇರಿದಂತೆ ಸಂಬಂಧಿಕರೊಂದಿಗೆ ತೆರಳಿ ಸಮಾಧಿಯ ದರ್ಶನ ಪಡೆದರು.

ಪತಿ ಸಮಾಧಿ ಮುಂದೆ ಕಣ್ಣೀರು ಹಾಕಿದ ಕುಸುಮಾ ಶಿವಳ್ಳಿ

ಈ ವೇಳೆ ತಮ್ಮ ಪತಿಯನ್ನು‌ ನೆನೆದು ಕುಸುಮಾ ಭಾವುಕರಾದರು. ಇದೇ ವೇಳೆ ಶಿವಳ್ಳಿಯವರ ಸಮಾಧಿಯ ಮೇಲೆ ಅಭಿಮಾನಿಗಳು ಕಾಂಗ್ರೆಸ್ ಬಾವುಟ ನೆಟ್ಟು ಜಯಘೋಷ ಹಾಕಿದರು.

For All Latest Updates

TAGGED:

ABOUT THE AUTHOR

...view details