ಹುಬ್ಬಳ್ಳಿ(ಧಾರವಾಡ): ಕೋವಿಡ್ ಉಲ್ಬಣಗೊಳ್ಳುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಹೈಸ್ಕೂಲ್ನಲ್ಲಿ ಕೋವಿಡ್ ಸ್ಫೋಟಗೊಂಡ ಹಿನ್ನೆಲೆ, ಶಾಲೆಯನ್ನು ಸೀಲ್ಡೌನ್ ಮಾಡಲಾಗಿದೆ.
ಹೈಸ್ಕೂಲ್ನ 28 ವಿದ್ಯಾರ್ಥಿಗಳಿಗೆ, ಓರ್ವ ಶಿಕ್ಷಕರಿಗೆ ಹಾಗೂ ಓರ್ವ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆ, ಮುಂದಿನ ಆದೇಶದವರೆಗೂ ಶಾಲೆಯನ್ನು ಸೀಲ್ಡೌನ್ ಮಾಡಲಾಗುವುದು.